ಕ್ರಿಯೇಟಿವ್ ಪ.ಪೂ ಕಾಲೇಜಿನಲ್ಲಿ 74ನೇ ಗಣರಾಜ್ಯೋತ್ಸವ ಆಚರಣೆ

ಕಾರ್ಕಳ: ರಾಜ ಪ್ರಭುತ್ವದೆಡೆಯಿಂದ ಪ್ರಜಾಪ್ರಭುತ್ವದ ಕಡೆಗೆ ಸಾಗಿದ ಹೆಗ್ಗುರುತೇ ಗಣರಾಜ್ಯೋತ್ಸವ. ಸಂವಿಧಾನ ನಮಗೆ ಅನೇಕ ಕೊಡುಗೆಗಳನ್ನು ನೀಡಿದೆ. ದೇಶದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ ದಿನವಿದು. ಆದ್ದರಿಂದ ನಾವೆಲ್ಲರೂ ಸಮಾನರೆಂಬ ಭಾವನೆಯನ್ನು ಸಂವಿಧಾನ ನಮಗೆ ನೀಡಿದೆ. ಕಾನೂನಿನ ಅಂಶಗಳನ್ನು ಗೌರವಿಸಿ, ರಾಷ್ಟ್ರಧ್ವಜ, ರಾಷ್ಟ್ರೀಯತೆಯನ್ನು ಗೌರವಿಸಿ ಬದುಕಬೇಕು ಎಂದು ಕ್ರಿಯೇಟಿವ್ ವಿದ್ಯಾಸಂಸ್ಥೆಯ ಅರ್ಥಶಾಸ್ತ್ರ ಉಪನ್ಯಾಸಕ ಉಮೇಶ್ ಹೇಳಿದರು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕ್ರಿಯೇಟಿವ್ ವಿದ್ಯಾಸಂಸ್ಥೆಯ ಸಂಸ್ಥಾಪ ಆದರ್ಶ ಎಂ.ಕೆ, ಸಂವಿಧಾನಾತ್ಮಕವಾಗಿ ನಮಗೆ ನೀಡಿರುವ ಅಧಿಕಾರವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿ ಪ್ರಜಾಸತ್ತಾತ್ಮಕ […]
ಮಾತೃಭೂಮಿ ಮತ್ತು ಮಾತೃಭಾಷೆಯನ್ನು ಬೆಳೆಸಿ: ಡಾ. ಹಿರೇಮಗಳೂರು ಕಣ್ಣನ್

ಕಾರ್ಕಳ: ಕನ್ನಡ ಭಾಷೆ ನೆಲ ಜಲವನ್ನು ಉತ್ತುಂಗಕ್ಕೇರಿಸಲು ಯುವ ಪೀಳಿಗೆ ಸನ್ನದ್ದವಾಗಿರಬೇಕು. ಕನ್ನಡದ ಕಂಪನ್ನು ವಿಶ್ವದೆಲ್ಲೆಡೆ ಪಸರಿಸಲು ನಾವು ಶ್ರಮಿಸಬೇಕು. ಪೂರ್ವಜರ ಆಸ್ತಿಯಾದ ಭಾಷೆ, ಕಲೆ, ಸಂಪತ್ತನ್ನು ವೃದ್ಧಿಸಬೇಕು. ದ್ವೇಷ ತ್ಯಜಿಸಿ ಸುಮನಸಿನವರಾಗಿ, ಹೆತ್ತವರನ್ನು ಪ್ರೀತಿಯಿಂದ ಸಲಹಿ, ಮಾತೃಭೂಮಿ ಮತ್ತು ಮಾತೃ ಭಾಷೆಯನ್ನು ಬೆಳೆಸಬೇಕು ಎಂದು ಡಾ. ಹಿರೇಮಗಳೂರು ಕಣ್ಣನ್ ಕರೆ ನೀಡಿದರು. ಅವರು ಮಂಗಳವಾರದಂದು ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ‘ಕ್ರಿಯೇಟಿವ್ ನುಡಿಹಬ್ಬ-2022’ ಅನ್ನು ಉದ್ಘಾಟಿಸಿ ‘ನಿನಾದ’ ತ್ರೈಮಾಸಿಕ ಪತ್ರಿಕೆಯ ಎರಡನೇ ಸಂಚಿಕೆಯನ್ನು […]
ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆ: ಲಿಖಿತ್.ಬಿ.ವೈ ಗೆ ಕಂಚಿನ ಪದಕ

ಉಡುಪಿ:ಹಾಸನ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಮೂಡುಬಿದ್ರೆಯ ಕ್ರೀಯೆಟಿವ್ ಎಜುಕೇಷನ್ ಫೌಂಡೇಶನ್ ನ ಶೈಕ್ಷಣಿಕ ಸಹಭಾಗಿತ್ವದ ನಗರ ಹೊರ ವಲಯದ ಹೆಚ್.ಕೆ.ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಲಿಖಿತ್.ಬಿ.ವೈ ಕಂಚಿನ ಪದಕ ಪಡೆಯುವ ಮೂಲಕ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹೆಚ್.ಕೆ.ಸುರೇಶ್, ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
ಕ್ರಿಯೇಟಿವ್ ಕಾಲೇಜು: ನಾಟಾ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಕಾರ್ಕಳ: ಆರ್ಕಿಟೆಕ್ಚರ್ ಕ್ಷೇತ್ರ ಸೇರಬಯಸುವ ವಿದ್ಯಾರ್ಥಿಗಳಿಗಾಗಿ ನಡೆದ ನಾಟಾ ಪರೀಕ್ಷೆಯ ರ‍್ಯಾಂಕ್ ಪಟ್ಟಿ ಪ್ರಕಟಗೊಂಡಿದ್ದು, ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳಾದ ಭೂಮಿಕಾ ಎಸ್ ಜಿ ರಾಜ್ಯಕ್ಕೆ 88 ನೇ ರ‍್ಯಾಂಕ್, ಚಂದು ಪಿ ಎನ್ 116 ನೇ ರ‍್ಯಾಂಕ್, ಅಂಕಿತ್ 118 ನೇ ರ‍್ಯಾಂಕ್, ಅನ್ವಿನ್ ಬಿ ಪಿ 125 ನೇ ರ‍್ಯಾಂಕ್, ಲಹರಿ 161 ನೇ ರ‍್ಯಾಂಕ್, ಚಿನ್ಮಯ ಹವಲಗೋಳ್ 184 ನೇ ರ‍್ಯಾಂಕ್, ಮನೀಷ್ 226 ನೇ ರ‍್ಯಾಂಕ್, ಆಕಾಶ್ ಹೆಚ್ ಸಿ 451 ನೇ […]
ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ ಕೆಸರ್ಡೊಂಜಿ ದಿನ ಕಾರ್ಯಕ್ರಮ

ಕಾರ್ಕಳ: ಕ್ರಿಯೇಟಿವ್ ಪ.ಪೂ. ಕಾಲೇಜಿನಲ್ಲಿ ಹಸಿರೊಡನೆ ಕಲಿಕೆಯ ಕಲರವ ಕಾರ್ಯಕ್ರಮ ಸೆ.19ರಂದು ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರ ಜರುಗಿತು. ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಹರಿಶ್ಚಂದ್ರ ಕುಲಾಲ್, ಇಂದು ನಾವು ವಿದ್ಯಾಭ್ಯಾಸದಲ್ಲಿ ಶೈಕ್ಷಣಿಕ ಪ್ರಗತಿಯನ್ನು ಮಾತ್ರ ಗಮನಿಸುತ್ತಿದ್ದೇವೆ ಆದರೆ ನಮಗೆ ಅನ್ನ ನೀಡುವ ಕೃಷಿ ಭೂಮಿ ಮತ್ತು ಕೃಷಿಕರ ಕುರಿತು ತಿಳುವಳಿಕೆ ಪಡೆಯಲು ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಕಾರ್ಯಕ್ರಮ. ವಿದ್ಯಾರ್ಥಿಗಳು ಕೆಸರನ್ನು ಅಸಹ್ಯ ಎಂದು ಭಾವಿಸದೇ ಮಣ್ಣಿನ ಮಕ್ಕಳಾಗಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ […]