ರಾಷ್ಟ್ರಮಟ್ಟದ ಜೆ.ಇ.ಇ ಬಿ-ಪ್ಲಾನಿಂಗ್ ನಲ್ಲಿ ಕ್ರಿಯೇಟಿವ್‌ ಕಾಲೇಜಿಗೆ 2 ರ‍್ಯಾಂಕ್‌

ಕಾರ್ಕಳ: ಮೇ 2023 ರಲ್ಲಿ ನಡೆದ ರಾಷ್ಟ್ರಮಟ್ಟದ ಜೆ.ಇ.ಇ ಬಿ-ಪ್ಲಾನಿಂಗ್‌ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪಿ.ಯು ಕಾಲೇಜಿನ ವಿದ್ಯಾರ್ಥಿಗಳಾದ ವರುಣ್‌ ಜಿ ನಾಯಕ್‌ ಆಲ್‌ ಇಂಡಿಯಾ ರ‍್ಯಾಂಕಿಂಗ್ ನಲ್ಲಿ 656 ನೇ ಸ್ಥಾನ ಗಳಿಸಿದ್ದಾರೆ ಹಾಗೂ ಸುಮುಖ್‌ ಶೆಟ್ಟಿ ಜೆ.ಎಸ್‌ ಬಿ.ಆರ್ಕ್‌ ನಲ್ಲಿ 609 ನೇ ರ‍್ಯಾಂಕ್‌ ಗಳಿಸಿದ್ದಾರೆ. ಕಾರ್ಕಳದ ಕ್ರಿಯೇಟಿವ್‌ ಕಾಲೇಜಿನಲ್ಲಿ ಹಾಗೂ ಕ್ರಿಯೇಟಿವ್‌ ಶೈಕ್ಷಣಿಕ ಸಹಭಾಗಿತ್ವದ ಹಾಸನದ ಹೆಚ್.ಕೆ.ಎಸ್‌ ಪದವಿ ಪೂರ್ವ ಕಾಲೇಜಿನಲ್ಲಿ ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಥಮ ಪಿ.ಯು.ಸಿ ಯಿಂದಲೇ ಅನುಭವಿ […]

ಕಾರ್ಕಳ ಕ್ರಿಯೇಟಿವ್‌ ಪ.ಪೂ ಕಾಲೇಜಿಗೆ ಸತತ ಎರಡನೇ ವರ್ಷವೂ ಶೇ. 100 ಫಲಿತಾಂಶ: ಕಾಲೇಜಿಗೆ ಒಟ್ಟು ಏಳು ರ‍್ಯಾಂಕ್‌ 

ಕಾರ್ಕಳ: 2022-23 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿಗೆ ಸತತ ಎರಡನೇ ವರ್ಷವೂ ಶೇ. 100 ಫಲಿತಾಂಶ ದೊರಕಿದೆ. ಪರೀಕ್ಷೆಗೆ ಕುಳಿತ ಎಲ್ಲಾ 380 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲೇ ತೇರ್ಗಡೆ ಹೊಂದುವ ಮೂಲಕ ವಿಶೇಷ ಸಾಧನೆ ಗೈದಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ರಾಜ್ಯದ ಹತ್ತು ರ‍್ಯಾಂಕ್‌ ಗಳಲ್ಲಿ ಏಳು ರ‍್ಯಾಂಕ್‌ ಗಳು ಕಾಲೇಜಿಗೆ ಸಂದಿವೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಪ್ರಸ್ತುತ್‌ ಪಟೇಲ್‌ 592 ಅಂಕಗಳೊಂದಿಗೆ ರಾಜ್ಯಕ್ಕೆ 5ನೇ ರ‍್ಯಾಂಕ್‌ […]

ಉಡುಪಿ: ಕ್ರಿಯೇಟಿವ್ ಕಾಲೇಜ್ ನಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮದಿನಾಚರಣೆ

ಉಡುಪಿ: ಮಹಾ ಮಾನವತಾವಾದಿ, ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 132ನೇ ಜನ್ಮದಿನಾಚರಣೆಯನ್ನು ಶುಕ್ರವಾರ ಆಚರಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲರಾದ ಸ್ಟ್ಯಾನಿ ಲೋಬೋ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಜಗತ್ತಿನಾದ್ಯಂತ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಅತ್ಯುನ್ನತ ವಿದ್ಯಾಭ್ಯಾಸವನ್ನು ಮಾಡಿ, ಶೋಷಿತ ಸಮುದಾಯದ ಬಾಳಿನ ಬೆಳಕಾಗಿ, ಇಡೀ ವಿಶ್ವವೇ ಮೆಚ್ಚುವಂತಹ ಜಗತ್ತಿನ ಅತಿ ದೊಡ್ಡ ಶ್ರೇಷ್ಠ ಸಂವಿಧಾನವನ್ನು ರಚಿಸಿದ ಕೀರ್ತಿ ಅಂಬೇಡ್ಕರ್ ರವರದ್ದು. ಅವರ ಕಠಿಣ ಪರಿಶ್ರಮ, ನಡೆದು ಬಂದ ದಾರಿ, ಅವರ ಜ್ಞಾನ, […]

ಕ್ರಿಯೇಟಿವ್‌ ಕಾಲೇಜಿನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್‌ ಅಂಬೇಡ್ಕರ್‌ ಜಯಂತಿ ಆಚರಣೆ

ಕಾರ್ಕಳ: ಸಂವಿಧಾನ ಶಿಲ್ಪಿ ಡಾ. ಬಿ ಆರ್‌ ಅಂಬೇಡ್ಕರ್‌ ರವರ 132 ನೇ ಜಯಂತಿಯನ್ನು ಇಂದು ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ಆಚರಿಸಲಾಯಿತು. ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌ ಇವರು ಪುಷ್ಪ ನಮನ ಸಲ್ಲಿಸಿ ಮಾತನಾಡಿ ಅಂಬೇಡ್ಕರ್ ರವರು ವಿದೇಶದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್‌ (ಪಿಹೆಚ್‌ಡಿ) ಪದವಿ ಪಡೆದ ಮೊದಲ ಭಾರತೀಯ. ಇವರು ಸುಮಾರು 64 ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದರು ಹಾಗೂ ಒಂಬತ್ತು ಭಾಷೆಗಳನ್ನು ಬಲ್ಲವರಾಗಿದ್ದರು. ವಿಶ್ವದರ್ಜೆಯ ವಕೀಲರು, ಸಾಮಾಜ ಸುಧಾರಕರೂ ಆಗಿದ್ದವರು. ಭಾರತದ ದಲಿತ […]

ಕ್ರಿಯೇಟಿವ್‌ ಕಾಲೇಜಿನ ವಿದ್ಯಾರ್ಥಿಗಳಿಂದ ಜೆಇಇ-ಮೈನ್ ಆರ್ಕಿಟೆಕ್ಚರ್‌ನಲ್ಲಿ ಉತ್ತಮ ಸಾಧನೆ

ಕಾರ್ಕಳ: ಜನವರಿ ತಿಂಗಳಿನಲ್ಲಿ ನ್ಯಾಷನಲ್‌ ಎಜೆನ್ಸಿ ನಡೆಸಿದ ಜಂಟಿ ಪ್ರವೇಶ ಪರೀಕ್ಷೆ-ಮುಖ್ಯ (ಜೆಇಇ-ಮೈನ್) ‌2ಎ (ಆರ್ಕಿಟೆಕ್ಚರ್‌) ಪರೀಕ್ಷೆಯಲ್ಲಿ ಕ್ರಿಯೇಟಿವ್‌ ಪ. ಪೂ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸಿದ್ದಾರೆ. ವಿದ್ಯಾರ್ಥಿಗಳಾದ ಕು. ದೀಕ್ಷಾ ಪಾಂಡು 95.8311 ಪರ್ಸಂಟೈಲ್‌, ಸಾತ್ವಿಕ್‌ ಕೆ ಭಟ್‌ 91.4659 ಪರ್ಸಂಟೈಲ್‌, ವರುಣ್‌ ಜಿ ನಾಯಕ್‌ 86.1552 ಪರ್ಸಂಟೈಲ್‌ ಅಂಕಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಕ್ರಿಯೇಟಿವ್‌ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಪರೀಕ್ಷಾ ಸಂಯೋಜಕ ಸುಮಂತ ದಾಮ್ಲೆ, ಉಪನ್ಯಾಸಕ ವರ್ಗದವರು […]