ಭಾರತ್ ಬಯೋಟೆಕ್ ಮೂಗಿನ ಮೂಲಕ ನೀಡಲಾಗುವ ಕೋವಿಡ್ ಲಸಿಕೆಯ 3ನೇ ಹಂತದ ಪ್ರಯೋಗ ಪೂರ್ಣ

ನವದೆಹಲಿ: ಇಂಟ್ರಾನಾಸಲ್ (ಮೂಗಿನ) ಕೋವಿಡ್-19 ಲಸಿಕೆಗಾಗಿ ಭಾರತ್ ಬಯೋಟೆಕ್ ಹಂತ III ಪ್ರಯೋಗಗಳು ಮತ್ತು ಬೂಸ್ಟರ್ ಡೋಸ್‌ ನ ಕ್ಲಿನಿಕಲ್ ಅಭಿವೃದ್ಧಿಯನ್ನು ಪೂರ್ಣಗೊಳಿಸಿದೆ. ಕೋವಿಡ್ -19 ಲಸಿಕೆ ಕೋವಾಕ್ಸಿನ್ ತಯಾರಕರಾದ ಭಾರತ್ ಬಯೋಟೆಕ್ ಮೂಗಿನ ಮೂಲಕ ನೀಡಲಾಗುವ BBV154 ಲಸಿಕೆಯ ಮೂರನೇ ಹಂತದ ಪ್ರಯೋಗಗಳಿಗಾಗಿ ಕ್ಲಿನಿಕಲ್ ಅಭಿವೃದ್ಧಿಯನ್ನು ಪೂರ್ಣಗೊಳಿಸಿದೆ. ಚುಚ್ಚುಮದ್ದಿಗೆ ಹೆದರುವವರಿಗೆ ಮೂಗಿನ ಮೂಲಕ ಔಷಧಿಯನ್ನು ನೀಡಬಹುದಾಗಿದ್ದು, ಪ್ರಪಂಚದ ಇತರ ದೇಶಗಳಲ್ಲಿ ಈ ವ್ಯವಸ್ಥೆ ಈಗಾಗಲೇ ಚಾಲ್ತಿಯಲ್ಲಿದೆ. ಬೂಸ್ಟರ್ ಡೋಸ್‌ಗಳನ್ನು ಮೂಗಿನ ಮೂಲಕ ನೀಡಲು ಬೇಕಾದ ಪ್ರಯೋಗಗಳು […]