ಕೋವಿಡ್ ಇನ್ನೂ ಮುಗಿದಿಲ್ಲ: ಚೀನಾದ ಓಮಿಕ್ರಾನ್ ರೂಪಾಂತರ BF.7 ಭಾರತದಲ್ಲೂ ಪತ್ತೆ; ಮುನ್ನೆಚರಿಕೆಯೆ ಮದ್ದು ಎಂದ ತಜ್ಞರು
ನವದೆಹಲಿ: ಚೀನಾದಲ್ಲಿ ಹಠಾತ್ ಪ್ರಕರಣಗಳ ಏರಿಕೆಗೆ ಕಾರಣವಾಗಿರುವ ಕೋವಿಡ್-19 ರೂಪಾಂತರವಾದ ಓಮಿಕ್ರಾನ್ ರೂಪಾಂತರ BF.7, ಭಾರತದಲ್ಲಿಯೂ ಪತ್ತೆಯಾಗಿದೆ ಎಂದು ವರದಿಯಾಗಿದೆ. ಭಾರತದಲ್ಲಿ BF.7 ನ ಮೊದಲ ಪ್ರಕರಣವನ್ನು ಗುಜರಾತ್ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್ ಅಕ್ಟೋಬರ್‌ನಲ್ಲಿ ಪತ್ತೆ ಮಾಡಿದೆ. ಇಲ್ಲಿಯವರೆಗೆ, ಗುಜರಾತ್‌ನಿಂದ ಎರಡು ಪ್ರಕರಣಗಳು ವರದಿಯಾಗಿದ್ದು, ಒಡಿಶಾದಿಂದ ಒಂದು ಪ್ರಕರಣ ವರದಿಯಾಗಿದೆ ಎಂದು ಪಿಟಿಐ ವರದಿ ತಿಳಿಸಿದೆ. ಭಾರತದಲ್ಲಿ ಈ ರೂಪಾಂತರದ 3 ಪ್ರಕರಣಗಳು ಪತ್ತೆಯಾಗಿದ್ದರೂ, ದೇಶದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಒಟ್ಟಾರೆ ಏರಿಕೆ ಕಂಡುಬಂದಿಲ್ಲ. ಕೇಂದ್ರ ಆರೋಗ್ಯ ಸಚಿವ […]