ಗಗನಕ್ಕೇರಿದ ಹಸಿರು ಸೊಪ್ಪಿನ ಬೆಲೆ: ಹೈರಾಣಾದ ಗ್ರಾಹಕರು

ಉಡುಪಿ: ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ಭಾರೀ ಮಳೆಯು ತರಕಾರಿಗಳ ಬೆಲೆಯನ್ನು ಹೆಚ್ಚಿಸಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ನೆರೆ ಹಾವಳಿಯಿಂದಾಗಿ ಹಸಿರು ಸೊಪ್ಪು ತರಕಾರಿಗಳು ಹೆಚ್ಚು ಹಾನಿಗೊಳಗಾಗಿವೆ. ಪ್ರವಾಹದಿಂದಾಗಿ ಅನೇಕ ಸಣ್ಣ ಮಾರುಕಟ್ಟೆಗಳು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿರುವುದರಿಂದ ದೊಡ್ಡ ಮಾರುಕಟ್ಟೆಗಳಿಗೆ ತಾಜಾ ತರಕಾರಿಗಳು ಬರುತ್ತಿಲ್ಲ. ಇನ್ನೂ ಕೆಲವು ವಾರಗಳವರೆಗೆ ಈ ಕೊರತೆ ಮುಂದುವರಿಯುವ ಸಾಧ್ಯತೆಯಿದ್ದು, ತರಕಾರಿ ಬೆಲೆಗಳು ಶೀಘ್ರದಲ್ಲೇ ಕಡಿಮೆಯಾಗುವ ಲಕ್ಷಣಗಳಿಲ್ಲ. ಇನ್ನೇನು ಸ್ವಲ್ಪ ದಿನಗಳಲ್ಲೇ ನವರಾತ್ರಿ ಹಬ್ಬ ಮತ್ತು ಮದುವೆ ಸಮಾರಂಭಗಳು ಶುರುವಾಗಲಿದ್ದು, ತರಕಾರಿ ಬೆಲೆಗಳು […]