ಮೋದಿ ಕನಸಿನ ಸದೃಢ ಸ್ವಾವಲಂಬಿ ‘ಹೊಸ ಭಾರತ’ಕ್ಕಾಗಿ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ: ರಾಜನಾಥ್ ಸಿಂಗ್
ಮಣಿಪಾಲ: ಯುವಕರು ಹೊಸ ಆವಿಷ್ಕಾರ, ತಂತ್ರಜ್ಞಾನಗಳನ್ನು ಅಭಿವೃದ್ದಿ ಪಡಿಸಿ ಹೊಸ ಕಂಪನಿ, ಸಂಶೋಧನಾ ಸಂಸ್ಥೆ ಮತ್ತು ಸ್ಟಾರ್ಟ್ ಅಪ್ ಗಳನ್ನು ಸ್ಥಾಪಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಲಿಷ್ಠ ಮತ್ತು ಸ್ವಾವಲಂಬಿ ‘ಹೊಸ ಭಾರತ’ದ ಕನಸನ್ನು ಸಾಕಾರಗೊಳಿಸಿ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ ಕರೆ ನೀಡಿದರು. ಅವರು ಶುಕ್ರವಾರದಂದು ಮಾಹೆಯ 30 ನೇ ಘಟಿಕೋತ್ಸವದ ಮೊದಲನೆ ದಿನ ಮತ್ತು ಮಣಿಪಾಲ್ ಸ್ಕೂಲ್ ಆಫ್ ಆರ್ಕಿಟೆಕ್ಚರ್‌ನ ಹೊಸ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ದೇಶದ ಯುವಕರ ಶಕ್ತಿಯನ್ನು ಜಗತ್ತೇ ಗುರುತಿಸುತ್ತಿದೆ. […]