ಜಾನಪದ ಸಾಹಿತ್ಯ ಹಿರಿಯರ ಕೊಡುಗೆ: ಕೆ.ಪಿ ಶೆಣೈ
ಕಾರ್ಕಳ: ಜಾನಪದ ಸಾಹಿತ್ಯ ಅನ್ನುವುದು ನಮ್ಮ ಹಿರಿಯರಿಂದ ಬಂದಿದ್ದು. ಜನ ಜೀವನದ ಜೊತೆಗೆ ಮಣ್ಣಿನ ಸಂಸ್ಕೃತಿಗೆ ಅನುಗುಣವಾಗಿ ಹುಟ್ಟಿದೆ. ಲಿಖಿತ ರೂಪದಲ್ಲಿ ಇಲ್ಲದೆ ಬಾಯಿಯಿಂದ ಬಾಯಿಗೆ ಹರಡಿರುವ ಅತ್ಯಂತ ಶ್ರೀಮಂತ ಸಾಹಿತ್ಯವಾಗಿದೆ. ಜಾನಪದ ಕಲೆ ಉಳಿಯಬೇಕು ಜಾನಪದ ಕಲೆಯ ಶ್ರೀಮಂತಿಕೆಯನ್ನು ಯುವ ಜನತೆಗೆ ತಿಳಿಸುವ ಕೆಲಸ ನಿರಂತರವಾಗಬೇಕು ಎಂದು ಕಾರ್ಕಳ ಶ್ರೀ ವೆಂಕಟರಮಣ ಎಜ್ಯೂಕೇಶನ್ ಟ್ರಸ್ಟ್ ಕಾರ್ಯದರ್ಶಿ ಕೆ.ಪಿ ಶೆಣೈ ಹೇಳಿದರು. ಅವರು ಅಂಡಾರು ವಿಠಲ ರುಕ್ಮಿಣಿಕಿಣಿ ಸಾಂಸ್ಕೃತಿಕ ಸಭಾಂಗಣ ಎಸ್.ವಿ.ಟಿ ಕಾರ್ಕಳದಲ್ಲಿ ಜರುಗಿದ ಕನ್ನಡ ಜಾನಪದ […]