ಯು-ಆಕ್ಟ್: ಉಡುಪಿ-ಅಡ್ವೊಕೆಸಿ ಆಫ್ ಕನ್ಸ್ಯುಮರ್ಸ್ ಆಂಡ್ ಸಿಟಿಜನ್ಸ್ ಉದ್ಘಾಟನೆ
ಉಡುಪಿ: ಯು-ಆಕ್ಟ್ -ಉಡುಪಿ-ಅಡ್ವೊಕೆಸಿ ಆಫ್ ಕನ್ಸ್ಯುಮರ್ಸ್ ಆಂಡ್ ಸಿಟಿಜನ್ಸ್, ಜಿಲ್ಲೆಯ ವಕೀಲರ ಹಾಗೂ ಸಾಮಾಜಿಕ ಕಾರ್ಯಕರ್ತರ ವೇದಿಕೆಯಾಗಿದ್ದು, ಗ್ರಾಹಕರಲ್ಲಿ ಮತ್ತು ನಾಗರೀಕರಲ್ಲಿ ಅವರ ಹಕ್ಕುಗಳ ಬಗ್ಗೆ ಅರಿವನ್ನು ಮೂಡಿಸುವ ಮತ್ತು ಅವಶ್ಯಕತೆ ಇದ್ದಲ್ಲಿ ಅವರಿಗೆ ಕಾನೂನಾತ್ಮಕವಾಗಿ ಪರಿಹಾರ ದೊರಕಿಸಲು ಶ್ರಮಿಸುವ ಸ್ವಯಂ ಸೇವಾ ಸಂಘಟನೆಯಾಗಿದೆ. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಉದ್ಘಾಟನೆಯನ್ನು ನೆರವೇರಿಸಿ,”ಇಂತಹ ಸಮಾಜಮುಖಿ ಸಂಸ್ಥೆಯು ಪ್ರಾರಂಭಗೊಳ್ಳುತ್ತಿರುವುದು ಶ್ಲಾಘನೀಯ. ವಕೀಲರು ಸಾಮಾನ್ಯವಾಗಿ ಕಾನೂನು ಸೇವೆಗಳ ಪ್ರಾಧಿಕಾರದ ಚಟುವಟಿಕೆಗಳಲ್ಲಿ ಕಡಿಮೆ ಭಾಗವಹಿಸುತ್ತಿದ್ದು,ಇದೀಗ ಯು-ಆಕ್ಟ್ ಸಂಸ್ಥೆಯ […]
ಜೂನ್ 12: ಉಡುಪಿ-ಅಡ್ವೊಕೆಸಿ ಆಫ್ ಕನ್ಸ್ಯುಮರ್ಸ್ ಆಂಡ್ ಸಿಟಿಜನ್ಸ್ ವೇದಿಕೆಯ ಉದ್ಘಾಟನೆ
ಉಡುಪಿ: ಜೂನ್ 12 ಭಾನುವಾರದಂದು ಬೆಳಿಗ್ಗೆ 11 ಗಂಟೆಗೆ “ಯು-ಆಕ್ಟ್” (ಉಡುಪಿ- ಅಡ್ವೊಕೆಸಿ ಆಫ್ ಕನ್ಸ್ಯುಮರ್ಸ್ ಆಂಡ್ ಸಿಟಿಜನ್ಸ್) ವೇದಿಕೆಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಉದ್ಘಾಟಕರಾಗಿ ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಶ್ರೀ ಶಾಂತವೀರ ಶಿವಪ್ಪರವರು ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ಶ್ರೀಮತಿ ಶರ್ಮಿಳಾ ಎಸ್, ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ಧನ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ […]