ಸತತ ಐದನೇ ಬಾರಿ ಗೆಲುವು ದಾಖಲಿಸಿದ ಯುಟಿ ಖಾದರ್

ಮಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಯುಟಿ ಖಾದರ್ ಮಂಗಳೂರು ಕ್ಷೇತ್ರದಲ್ಲಿ 82,637 ಮತಗಳನ್ನು ಪಡೆಯುವ ಮೂಲಕ ಸತತ ಐದನೇ ಗೆಲುವು ದಾಖಲಿಸಿದ್ದಾರೆ. ಎನ್.ಐ.ಟಿ.ಕೆನಲ್ಲಿ ಮತ ಎಣಿಕೆ ಆರಂಭವಾದಾಗಿನಿಂದ ಖಾದರ್ ಮುನ್ನಡೆ ಕಾಯ್ದುಕೊಂಡಿದ್ದರು. ಇದೇ ವೇಳೆ ಬಿಜೆಪಿಯ ಸತೀಶ್ ಕುಂಪಲ 59,660 ಮತಗಳನ್ನು ಪಡೆದಿದ್ದಾರೆ.
128 ಕ್ಷೇತ್ರಗಳಲ್ಲಿ ಮುನ್ನಡೆಯೊಂದಿಗೆ ಬಹುಮತದತ್ತ ಕಾಂಗ್ರೆಸ್ ; ಚಳ್ಳಕೆರೆಯಲ್ಲಿ ಗೆಲುವು ದಾಖಲು

ಬೆಂಗಳೂರು: ಬಹು ಸುತ್ತಿನ ಇವಿಎಂ ಎಣಿಕೆಯ ನಂತರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಹುಮತದತ್ತ ಮುನ್ನಡೆಯುತ್ತಿರುವುದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಚಿಸುವುದು ಬಹುತೇಕ ಸ್ಪಷ್ಟವಾಗಿದೆ. ಕಾಂಗ್ರೆಸ್ ಪಕ್ಷವು 128 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 68 ರಲ್ಲಿ, ಜೆ.ಡಿ.ಎಸ್ 22 ಅನ್ಯರು 6 ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿದ್ದಾರೆ. ಚಳ್ಳಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅದಾಗಲೇ ಗೆಲುವು ಸಾಧಿಸಿದೆ.
ಆರಂಭಿಕ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದ ಕಾಂಗ್ರೆಸ್; ಮೊದಲನೆ ಹಂತದಲ್ಲಿ 116 ಸೀಟುಗಳಲ್ಲಿ ಮುನ್ನಡೆ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಮೊದಲನೆ ಹಂತದ ಎಣಿಕೆಯಲ್ಲಿ ಕಾಂಗ್ರೆಸ್ ಮ್ಯಾಜಿಕ್ ನಂಬರ್ ದಾಟಿದ್ದು, 116 ಸೀಟುಗಳಲ್ಲಿ ಮುನ್ನಡೆ ಕಾಯುಕೊಂಡಿದೆ. ಅಂಚೆ ಮತದಾನದ ಎಣಿಕೆ ನಡೆದಿದ್ದು, ಇದರಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದತ್ತ ಮುನ್ನುಗುತ್ತಿದೆ. ಭಾರತೀಯ ಪಕ್ಷ 83 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು ಜೆ.ಡಿ.ಎಸ್ 20 ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿದೆ. ಇತರ 01 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಏತನ್ಮಧ್ಯೆ ಶ್ರೀರಾಮುಲು, ಸುಧಾಕರ್, ರಮೇಶ್ ಜಾರಕಿಹೊಳಿ, ಕುಮಾರಸ್ವಾಮಿ, ಬಿ.ಸಿ.ಪಾಟೀಲ್, ಸಿ.ಟಿ.ರವಿ, ಕಾರಜೋಳ, ಸೋಮಣ್ಣ ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ.
ಮೂಡುಶೆಡ್ಡೆಯಲ್ಲಿ ಚುನಾವಣೋತ್ತರ ಗಲಭೆ: ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

ಮಂಗಳೂರು: ಮೂಡುಶೆಡ್ಡೆಯಲ್ಲಿ ಅಹಿತಕರ ಘಟನೆ ನಡೆದ ಹಿನ್ನೆಲೆಯಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಐದು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿಆರ್‌ಪಿಸಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬಜ್ಪೆ, ಕಾವೂರು, ಮೂಡುಬಿದಿರೆ, ಸುರತ್ಕಲ್ ಮತ್ತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇ 14 ರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಂಶುಕುಮಾರ್ ತಿಳಿಸಿದ್ದಾರೆ. ಬುಧವಾರ ತಡರಾತ್ರಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಕಲ್ಲು […]
ಕರ್ನಾಟಕ ವಿಧಾನಸಭಾ ಚುನಾವಣೆ: 72.67% ಮತದಾನ; ಅತಂತ್ರ ಸರಕಾರದ ಮುನ್ಸೂಚನೆ ನೀಡಿದ ಎಕ್ಸಿಟ್ ಪೋಲ್ ಗಳು

ಬೆಂಗಳೂರು: ಬುಧವಾರ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸರಿಸುಮಾರು 72.67% ಮತದಾನವಾಗಿದೆ. 2018 ರ ಚುನಾವಣೆಯಲ್ಲಿ 72.44% ಮತ್ತು 2013 ರಲ್ಲಿ 71.83% ಮತದಾನವಾಗಿತ್ತು. ದ.ಕ ಜಿಲ್ಲೆಯಲ್ಲಿ 76.15% ಮತದಾನವಾಗಿದ್ದರೆ, ಉಡುಪಿಯಲ್ಲಿ 78.46% ಮತದಾನವಾಗಿದೆ. ಚಿಕ್ಕಬಳ್ಳಾಪುರದಲ್ಲಿ ಸರ್ವಾಧಿಕ 85.83% ಮತದಾನವಾಗಿದ್ದರೆ, ಬಿ.ಬಿ.ಎಂ.ಪಿ(ದಕ್ಷಿಣ) ದಲ್ಲಿ 52.80% ಮತದಾನ ನಡೆದಿದೆ. ಮೂರು ಪ್ರಮುಖ ಎಕ್ಸಿಟ್ ಪೋಲ್ ಏಜೆನ್ಸಿಗಳು ಸೂಚಿಸಿದಂತೆ ಕರ್ನಾಟಕವು ಅತಂತ್ರ ಫಲಿತಾಂಶವನ್ನು ಸೂಚಿಸುತ್ತಿದೆ. ಬಹುತೇಕ ಎಕ್ಸಿಟ್ ಪೋಲ್ ಗಳು ಕಾಂಗ್ರೆಸ್ ಗೆ ಬಹುಮತವನ್ನು ಸೂಚಿಸುತ್ತಿದ್ದರೆ ಮತ್ತೆ ಕೆಲವು ಪೋಲ್ […]