ರಾಷ್ಟ್ರೀಕೃತ ಬ್ಯಾಂಕ್‌ನ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ

ಉಡುಪಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕ.ರಾ.ಮು.ವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಐ.ಬಿ.ಪಿ.ಎಸ್ ರಾಷ್ಟ್ರೀಕೃತ ಬ್ಯಾಂಕ್‌ನ ಅಧಿಕಾರಿ ಮತ್ತು ಗುಮಾಸ್ತರ ಹುದ್ದೆಗಳ ನೇಮಕಾತಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 45 ದಿನಗಳ ತರಬೇತಿ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 29 ರ ಒಳಗೆ 10 ರಿಂದ ಸಂಜೆ 4 ಗಂಟೆಯವರೆಗೆ ಹೆಸರನ್ನು ನೊಂದಾಯಿಸಲು ದೂರವಾಣಿ ಸಂಖ್ಯೆ: 0821-2515944 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಆಚಾರ್ಯಾಸ್ ಏಸ್: ಜೂನ್ ಮೊದಲ ವಾರದಿಂದ ಹೊಸ ಬ್ಯಾಚ್ ಪ್ರಾರಂಭ

ಉಡುಪಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ಆಯೋಜಿಸಿ ಗರಿಷ್ಠ ಫಲಿತಾಂಶವನ್ನು ಗಳಿಸುತ್ತಿರುವ ಉಡುಪಿಯ ಆಚಾರ್ಯಾಸ್ ಏಸ್ ವತಿಯಿಂದ ಒಂಬತ್ತನೇ ಮತ್ತು ಹತ್ತನೇ ತರಗತಿ, ಪ್ರಥಮ ಮತ್ತು ದ್ವಿತೀಯ ಪಿಯುಸಿ, ಸಿ.ಇ.ಟಿ, ನೀಟ್, ಜೆ.ಇ.ಇ ಮುಂತಾದವುಗಳ ತರಬೇತಿಯ ಹೊಸ ಬ್ಯಾಚ್ ಜೂನ್ ಮೊದಲ ವಾರದಿಂದ ಆರಂಭವಾಗಲಿದೆ. ಕಳೆದ 8 ವರ್ಷಗಳಲ್ಲಿ ಹತ್ತನೇ ತರಗತಿ, ಪಿಯುಸಿ ಹಾಗೂ ಸಿಇಟಿಯಲ್ಲಿ ಅತ್ಯುತ್ತಮ ಫಲಿತಾಂಶ ಹಾಗೂ ಶ್ರೇಯಾಂಕಗಳನ್ನು ಗಳಿಸಿರುವ ಆಚಾರ್ಯಾಸ ಏಸ್ ಈ ಭಾರಿ ಇನ್ನಷ್ಟು ಉಪಯುಕ್ತ ಯೋಜನೆಗಳೊಂದಿಗೆ ತರಬೇತಿಯನ್ನು ಆಯೋಜಿಸಿದೆ. […]