ಅರಬ್ಬೀ ಸಮುದ್ರದಲ್ಲಿ ವಾಣಿಜ್ಯ ಹಡಗುಗಳ ಮೇಲೆ ದಾಳಿ ತಡೆಯಲು ಮೂರು ಯುದ್ದನೌಕೆಗಳನ್ನು ನಿಯೋಜಿಸಿದ ಭಾರತೀಯ ನೌಕಾಪಡೆ

ನವದೆಹಲಿ: ಭಾರತೀಯ ನೌಕಾಪಡೆಯ ಸ್ಫೋಟಕ ಸಶಸ್ತ್ರಪಡೆ ವಿಲೇವಾರಿ ತಂಡವು ಸೋಮವಾರ ಮುಂಬೈ ಬಂದರಿಗೆ ಆಗಮಿಸಿದ ವ್ಯಾಪಾರಿ ನೌಕೆ ಎಂವಿ ಕೆಮ್ ಪ್ಲುಟೊದ ವಿವರವಾದ ತಪಾಸಣೆ ನಡೆಸಿತು. ಭಾರತದ ಪಶ್ಚಿಮ ಕರಾವಳಿಯಲ್ಲಿ ಅರಬ್ಬೀ ಸಮುದ್ರದಲ್ಲಿ ಹೊಸ ಮಂಗಳೂರು ಬಂದರಿಗೆ ಈ ಹಡಗು ತೆರಳುತ್ತಿದ್ದಾಗ ಡ್ರೋನ್‌ನಿಂದ ದಾಳಿ ಮಾಡಿದ ಘಟನೆಯ ಎರಡು ದಿನಗಳ ನಂತರ ಈ ತಪಾಸಣೆ ನಡೆದಿದೆ. ಅರಬ್ಬೀ ಸಮುದ್ರದಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳ ಹಿನ್ನೆಲೆಯಲ್ಲಿ, ಭಾರತೀಯ ನೌಕಾಪಡೆಯು ಕಣ್ಗಾವಲಿಗಾಗಿ P-8I ದೀರ್ಘ-ಶ್ರೇಣಿಯ ಗಸ್ತು ವಿಮಾನವನ್ನು ಮತ್ತು […]