ಕೊಯಮತ್ತೂರು ಸ್ಫೋಟ: ಆತ್ಮಹತ್ಯಾ ದಾಳಿ ಎಂದು ಒಪ್ಪಿಕೊಳ್ಳಿ ಎಂದ ಅಣ್ಣಾಮಲೈ; ಯುಎಪಿಎ ಹೇರಿದ ಪೊಲೀಸರು
ಕೊಯಮತ್ತೂರು: ಕೊಯಮತ್ತೂರಿನಲ್ಲಿ ಭಾನುವಾರ ಮುಂಜಾನೆ ವಾಹನದಲ್ಲಿದ್ದ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡಾಗ ವ್ಯಕ್ತಿಯೊಬ್ಬನ ಸಾವಿಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ ಒಂದು ದಿನದ ನಂತರ, ಐವರು ಆರೋಪಿಗಳ ವಿರುದ್ಧ ಮಂಗಳವಾರ ಕಾನೂನುಬಾಹಿರ ಚಟುವಟಿಕೆ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಹೇರಲಾಗಿದೆ ಎಂದು ಕೊಯಮತ್ತೂರು ನಗರ ಪೊಲೀಸ್ ಕಮಿಷನರ್ ವಿ ಬಾಲಕೃಷ್ಣನ್ ಹೇಳಿದ್ದಾರೆ. ಕೊಯಮತ್ತೂರು ಪೊಲೀಸರು ಬಂಧಿತ ಆರೋಪಿಗಳನ್ನು ಜಿಎಂ ನಗರದ ಮೊಹಮ್ಮದ್ ಧಾಲ್ಹಾ (25), ಮೊಹಮ್ಮದ್ ಅಜರುದ್ದೀನ್ (25), ಮೊಹಮ್ಮದ್ ರಿಯಾಜ್ (27), ಫಿರೋಜ್ ಇಸ್ಮಾಯಿಲ್ (27), ಮತ್ತು ಮೊಹಮ್ಮದ್ ನವಾಜ್ […]