ಕರಾವಳಿ ವಲಯ ನಿರ್ವಹಣಾ ಯೋಜನಾ ನಕಾಶೆಗೆ ಕೇಂದ್ರದ ಅನುಮೋದನೆ
ಉಡುಪಿ: ಕರಾವಳಿ ನಿಯಂತ್ರಣ ವಲಯ ಅಧಿಸೂಚನೆಗೆ ಸಂಬಂಧಿಸಿದಂತೆ, ಕರಾವಳಿ ವಲಯ ನಿರ್ವಹಣಾ ಯೋಜನಾ ನಕಾಶೆಗೆ ಪ್ರಸ್ತುತ ಸಾಲಿನ ಸೆಪ್ಟಂಬರ್ 2 ರಂದು ಕೇಂದ್ರ ಸರ್ಕಾರದಿಂದ ಅನುಮೋದನೆಗೊಂಡಿದ್ದು, ಅನುಮೋದಿತ ದಿನಾಂಕದಿಂದ ಕರಾವಳಿ ನಿಯಂತ್ರಣ ವಲಯ 2019 ರ ಅಧಿಸೂಚನೆ ಜಾರಿಯಲ್ಲಿರುತ್ತದೆ ಎಂದು ಉಡುಪಿ ಪ್ರಾದೇಶಿಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.