ಕಾರ್ಕಳ: ರಿಕ್ಷಾ ಚಾಲಕರಿಂದ ಬಟ್ಟೆ ಅಂಗಡಿ ಸಿಬ್ಬಂದಿ ಮೇಲೆ ಹಲ್ಲೆ
ಕಾರ್ಕಳ: ರಿಕ್ಷಾ ಬಾಡಿಗೆ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರ ಮೇಲೆ ರಿಕ್ಷಾ ಚಾಲಕರು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ. ಕುಕ್ಕುಂದೂರು ಯೋಗೀಶ ನಾಯಕ್ ಕಾರ್ಕಳ ಜೋಡು ರಸ್ತೆಯಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಎ.29 ರಂದು ತಮ್ಮ ಅಂಗಡಿಯ ಮಾಲೀಕರ ಮತ್ತೊಂದು ಅಂಗಡಿಯ ಕೆಲಸಗಾರರಿಗೆ ತಿಂಡಿ ಕೊಡಲು ಹೋಗುತ್ತಿರುವಾಗ ಆಪಾದಿತ ರಿಕ್ಷಾಚಾಲಕ ಪದ್ಮನಾಭ ಶೆಟ್ಟಿಗಾರ್, ಮನೋಜ್ ಮತ್ತು ಪ್ಯಾಸ್ಕಲ್ ಎಂಬುವರು ಯೋಗೀಶ್ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಮಾತ್ರವಲ್ಲದೆ ತಮಗೆ ರಿಕ್ಷಾ ಬಾಡಿಗೆ […]