ಅನೈಚ್ಛಿಕ ಡೌನ್‌ಗ್ರೇಡ್ ಟಿಕೆಟ್ ಗಳಿಗೆ ವಿಮಾನ ಸಂಸ್ಥೆಗಳಿಂದ ಸಂಪೂರ್ಣ ಮರುಪಾವತಿ: ಡಿಜಿಸಿಎ ಹೊಸ ಮಾನದಂಡ
ಹೊಸದಿಲ್ಲಿ: ವಿಮಾನಯಾನ ನಿಯಂತ್ರಕ ಡಿಜಿಸಿಎ ಹೊಸ ಮಾನದಂಡಗಳನ್ನು ಜಾರಿಗೆ ತರಲು ಸಿದ್ಧತೆ ನಡೆಸಿದ್ದು, ವಿಮಾನಯಾನ ಸಂಸ್ಥೆಗಳು ನಿರ್ದಿಷ್ಟ ವರ್ಗದ ಟಿಕೆಟ್‌ಗಳನ್ನು ಅನೈಚ್ಛಿಕವಾಗಿ ಡೌನ್‌ಗ್ರೇಡ್ ಮಾಡಿದಲ್ಲಿ ಪ್ರಯಾಣಿಕರಿಗೆ ಪರಿಹಾರವನ್ನು ನೀಡುವ ನಿಯಮಾವಳಿಗಳಿ ಶೀಘ್ರದಲ್ಲೇ ಜಾರಿಗೆ ಬರಲಿವೆ. ನಿಯಮಗಳು ಜಾರಿಗೆ ಬಂದ ನಂತರ, ಸಂಬಂಧಪಟ್ಟ ವಿಮಾನಯಾನ ಸಂಸ್ಥೆಯು ತೆರಿಗೆಗಳನ್ನು ಒಳಗೊಂಡಂತೆ ಅಂತಹ ಟಿಕೆಟ್‌ಗಳ ಸಂಪೂರ್ಣ ಮೌಲ್ಯವನ್ನು ಮರುಪಾವತಿಸಬೇಕಾಗುತ್ತದೆ ಮತ್ತು ಪೀಡಿತ ಪ್ರಯಾಣಿಕರನ್ನು ಮುಂದಿನ ಲಭ್ಯವಿರುವ ಕ್ಲಾಸ್ ನಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ಡಿಜಿಸಿಎ ತಿಳಿಸಿದೆ. ಡೌನ್‌ಗ್ರೇಡ್ ಎಂದರೇನು? […]