ಕವಿತೆ ತಾನಾಗಿ ಹುಟ್ಟಿ ಹರಿಯಬೇಕು: ಎಸ್.ಕೆ ಕುಂಪಲ
ಉಳ್ಳಾಲ: ಕವಿತೆ ತಾನಾಗಿ ಹುಟ್ಟಿ ಹರಿಯಬೇಕು, ಇದು ಅವರವರ ಭಾವಕ್ಕೆ ಸಂಬಂಧಿಸಿದ್ದಾಗಿದೆ. ಬೆಳಕು ಭಗವಂತನ ಪ್ರತಿ ರೂಪ. ಉರಿದು ಬೆಳಕು ಕೊಡುವ ಜ್ಯೋತಿ ಬೆಂಕಿಯೂ ಆಗ ಬಲ್ಲುದು ಎಂದು ಹಿರಿಯ ಕವಿ ಎಸ್.ಕೆ. ಕುಂಪಲ ಉಳ್ಳಾಲ ತಾ. ಚು. ಸಾ. ಪರಿಷತ್ತು ದೀಪಾವಳಿಯ ಪ್ರಯುಕ್ತ ಆಯೋಜಿಸಿದ್ದ, ‘ಕಾವ್ಯ ದೀಪೋತ್ಸವ’ ಕಾರ್ಯಕ್ರಮದ ಅಂಗವಾಗಿ ನಡೆದ ಕವಿ ಗೋಷ್ಠಿಯ ಅಧ್ಯಕ್ಷ ಭಾಷಣದಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಈ ವಿಶಿಷ್ಟ ಸರಳ ಕಾರ್ಯಕ್ರಮವು ಅ 21 ರಂದು ಸಂಜೆ […]