ಸಿಂಗಾಪುರದಲ್ಲಿ ಚೀನಾದ ವಿಮಾನ ತುರ್ತು ಭೂಸ್ಪರ್ಶ, 9 ಜನರು ಅಸ್ವಸ್ಥ: ಇಂಜಿನ್ನಲ್ಲಿ ಕಾಣಿಸಿಕೊಂಡ ಬೆಂಕಿ

ಬೀಜಿಂಗ್ (ಚೀನಾ): ಎಂಜಿನ್ನಲ್ಲಿ ಬೆಂಕಿ ಕಾಣಿಕೊಂಡಿರುವ ಹಿನ್ನೆಲೆ ವಿಮಾನದ ಕ್ಯಾಬಿನ್‌ನಲ್ಲಿ ಹೊಗೆ ಆವರಿಸಿದೆ. ಪರಿಣಾಮ 9 ಪ್ರಯಾಣಿಕರು ಅಸ್ವಸ್ಥಗೊಂಡಿದ್ದಾರೆ. ಚೀನಾದ ಏರ್‌ಲೈನ್‌ನ ಏರ್ ಚೀನಾ ವಿಮಾನದ ಇಂಜಿನ್‌ಗೆ ಬೆಂಕಿ ತಗುಲಿ, ಅದರ ಕ್ಯಾಬಿನ್‌ನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿತ್ತು. ಇದರಿಂದ ಸಿಂಗಾಪುರದ ನಿಲ್ದಾಣದಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಲಾಯಿತು.146 ಪ್ರಯಾಣಿಕರು ಮತ್ತು ಒಂಬತ್ತು ಸಿಬ್ಬಂದಿಯೊಂದಿಗೆ A320 ಚೀನಾದ ವಿಮಾನ ಭಾನುವಾರ ಸಂಜೆ 4.15ರ ಸುಮಾರಿಗೆ ಸಿಂಗಾಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿತು ಎಂದು ಚಾಂಗಿ ವಿಮಾನ ನಿಲ್ದಾಣದ ಅಧಿಕೃತ ಮೂಲಗಳು […]