ಚೀನಾದಲ್ಲಿ ಮಕ್ಕಳಲ್ಲಿ ನ್ಯುಮೋನಿಯಾ ಏಕಾಏಕಿ ಏರಿಕೆ: ಭಾರತಕ್ಕೆ ಅಪಾಯ ಇಲ್ಲದಿದ್ದರೂ ಜಾಗರೂಕತೆ ಅಗತ್ಯ

ನವದೆಹಲಿ: ಚೀನಾದಲ್ಲಿ ಮಕ್ಕಳಲ್ಲಿ ನ್ಯುಮೋನಿಯಾ ತರಹದ ಸೋಂಕಿನ ಏಕಾಏಕಿ ಏರಿಕೆಯನ್ನು ಭಾರತವು ಸೂಕ್ಷ್ಮವಾಗಿ ಗಮನಿಸುತ್ತಿದೆ. ಸದ್ಯ ಈ ವೈರಸ್ ನಿಂದ ಯಾವುದೇ ಬೆದರಿಕೆಗಳು ಕಂಡು ಬರುತ್ತಿಲ್ಲವಾದರೂ ಕೇಂದ್ರ ಆರೋಗ್ಯ ಸಚಿವಾಲಯವು ಜಾಗರೂಕವಾಗಿದ್ದು, ಆಸ್ಪತ್ರೆಗಳು ತುರ್ತು ಪರಿಸ್ಥಿತಿಯ ಸಿದ್ದತೆಯನ್ನು ಗಮನಿಸುವಂತೆ ಸೂಚನೆ ನೀಡಿದೆ. ಚಳಿಗಾಲ ಮತ್ತು ಮಾಲಿನ್ಯಪೂರ್ಣ ಹವಾಮಾನದ ಸಂದರ್ಭದಲ್ಲಿ ವೈರಲ್ ಫ್ಲೂ ಸಾಮಾನ್ಯವಾಗಿದ್ದು, ಸಾರ್ವಜನಿಕರು ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡುವುದು ಈ ಪರಿಸ್ಥಿತಿಯಲ್ಲಿ ಅಗತ್ಯವೆನಿಸಿದೆ. ವೈದ್ಯರ ಪ್ರಕಾರ ನಿಯಮಿತವಾಗಿ ಕೈಗಳನ್ನು ತೊಳೆಯುವುದು, ಸೀನುವಾಗ ಮತ್ತು ಕೆಮ್ಮುವಾಗ ಮಕ್ಕಳು […]