ಬಾಲ್ಯದ ಕ್ಯಾನ್ಸರ್- ಜಾಗೃತಿ ಮಾಸ: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಮೇಣದ ಬತ್ತಿ ಜಾಥಾ
ಮಣಿಪಾಲ: ಸೆ. 24 ಶನಿವಾರದಂದು ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಕಸ್ತೂರ್ಬಾ ಆಸ್ಪತ್ರೆಯು ಆಕ್ಸೆಸ್ ಲೈಫ್ ಅಸಿಸ್ಟೆನ್ಸ್ ಫೌಂಡೇಶನ್ ಸಹಯೋಗದೊಂದಿಗೆ ಬಾಲ್ಯದ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ಮೇಣದ ಬತ್ತಿ ನಡಿಗೆಯನ್ನು ಆಯೋಜಿಸಿತ್ತು. ಬಾಲ್ಯದ ಕ್ಯಾನ್ಸರನ್ನು ಆರಂಭಿಕ ಹಂತದಲ್ಲಿ ಪತ್ತೆಮಾಡಿ ಮತ್ತು ತಜ್ಞ ವೈದ್ಯರ ತಂಡದ ಮೂಲಕ ಸರಿಯಾದ ಸಮಯದಲ್ಲಿ ಚಿಕಿತ್ಸೆ ಕೊಡಿಸಿದರೆ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. ಸೆಪ್ಟೆಂಬರ್ ತಿಂಗಳು ಬಾಲ್ಯದ ಕ್ಯಾನ್ಸರ್ ಜಾಗೃತಿ ಮಾಸವಾಗಿದ್ದು, ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ಮಕ್ಕಳ […]
ಮಣಿಪಾಲ್ ಮ್ಯಾರಥಾನ್ 2023ರ 5 ನೇ ಆವೃತ್ತಿ ದಿನಾಂಕ ಪ್ರಕಟ: ಮುಂದಿನ ವರ್ಷ 12 ಫೆಬ್ರವರಿಯಂದು ಮ್ಯಾರಥಾನ್ ಆಯೋಜನೆ; 15000 ಜನರು ಭಾಗವಹಿಸುವ ನಿರೀಕ್ಷೆ
ಮಣಿಪಾಲ: ಮಂಗಳವಾರದಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ್ ಮ್ಯಾರಥಾನ್ 2023ರ 5 ನೇ ಆವೃತ್ತಿಯನ್ನು ಘೋಷಿಸಿತು. ಮಾಹೆ ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಮತ್ತು ಎನ್.ಇ.ಬಿ ಸ್ಪೋರ್ಟ್ಸ್ ಬೆಂಗಳೂರು ಇವರ ಸಹಯೋಗದೊಂದಿಗೆ ಮ್ಯಾರಥಾನ್ ಆಯೋಜಿಸಲಾಗುವುದು. ಮಣಿಪಾಲ್ ಮ್ಯಾರಥಾನ್‌ನ 5 ನೇ ಆವೃತ್ತಿಯು ಬಾಲ್ಯದ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. “ಆರಂಭಿಕ ಪತ್ತೆ ಜೀವಗಳನ್ನು ಉಳಿಸುತ್ತದೆ-ಐ ಕ್ಯಾನ್ ಸರ್-ವೈವ್” ಎನ್ನುವ ಅಡಿಬರಹದೊಂದಿಗೆ ಮ್ಯಾರಥಾನ್ ಆಯೋಜನೆಗೊಳ್ಳಲಿದೆ. ಈ ಮ್ಯಾರಥಾನ್ ಮೂಲಕ […]