ಅನಾಥ ಮಕ್ಕಳ ಪುನರ್ವಸತಿಗಾಗಿ ದತ್ತು ಸ್ವೀಕಾರ, ಪೋಷಕತ್ವ ಯೋಜನೆ ಅನುಷ್ಠಾನ

ಉಡುಪಿ: ಮಕ್ಕಳ ರಕ್ಷಣಾ ಘಟಕದ ವತಿಯಿಂದ ಸಂಕಷ್ಟದಲ್ಲಿರುವ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲು ಪೋಷಕತ್ವ ಯೋಜನೆ, ದತ್ತು ಕಾರ್ಯಕ್ರಮ ಹಾಗೂ ಮಮತೆಯ ತೊಟ್ಟಿಲು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಪೋಷಕತ್ವ ಕಾರ್ಯಕ್ರಮ ಯೋಜನೆ: ಬಾಲನ್ಯಾಯ ಕಾಯ್ದೆ ಅನ್ವಯ ಮಕ್ಕಳ ಪಾಲನೆ ಹಾಗೂ ಪೋಷಣೆಗಾಗಿ ಕುಟುಂಬಗಳಿಗೆ ಮರುಸೇರ್ಪಡೆಗೊಳಿಸಲು ಸಾಧ್ಯವಾಗದ ದತ್ತು ಮುಕ್ತವಾಗದ ಮತ್ತು ದತ್ತು ಹೋಗಲು ಸಾಧ್ಯವಾಗದ, 6 ರಿಂದ 18 ವರ್ಷದೊಳಗಿನಮಕ್ಕಳನ್ನು ಪೋಷಕತ್ವ ಯೋಜನೆ ಮುಖಾಂತರ ಮಗುವಿನ ಜೈವಿಕ ಪೋಷಕರಲ್ಲದ ಕುಟುಂಬಗಳಲ್ಲಿ ಕೌಟುಂಬಿಕ ವ್ಯವಸ್ಥೆಯಲ್ಲಿಬೆಳೆಸುವ ಪರ್ಯಾಯ ಪೋಷಣಾ ಯೋಜನೆಯಾಗಿದೆ. ಪ್ರತಿಯೊಂದು ಮಗುವಿಗೂ […]