ವೃತ್ತಿ ನಿರತ ಛಾಯಾಗ್ರಾಹಕರಿಂದ ಛಾಯಾ ಧರ್ಮ ಜಾಗೃತಿ ಅಭಿಯಾನ: ಎಸೆದ ದೇವರ ಹಳೆ ಫೋಟೋಗಳಿಗೆ ಗೌರವಯುತ ವಿದಾಯ
ಉಡುಪಿ: ಜನರ ಅಂದ ಚೆಂದದ ಛಾಯಾಚಿತ್ರಗಳನ್ನು ತಮ್ಮ ಕ್ಯಾಮರಾ ಕಣ್ಣುಗಳಲ್ಲಿ ಸೆರೆಹಿಡಿದು ನೆನಪುಗಳನ್ನು ಶಾಶ್ವತವಾಗಿಸುವ ಛಾಯಾಗ್ರಾಹಕರು ಹೊಸ ಅಭಿಯಾನವೊಂದನ್ನು ಹುಟ್ಟು ಹಾಕಿದ್ದು, ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ಪ್ರಾಪ್ತವಾಗಿದೆ. ಮನೆ ಕಚೇರಿಗಳಲ್ಲಿ ಹಲವಾರು ವರ್ಷಗಳವರೆಗೆ ಪೂಜಿಸಲ್ಪಟ್ಟು ವಿರೂಪವಾಗಿ ಎಸೆದಿರುವಂತಹ ದೇವರ ಚಿತ್ರಗಳನ್ನು ವಿಶಿಷ್ಟ ರೀತಿಯಲ್ಲಿ ವಿಲೇವಾರಿ ಮಾಡಿ ಜನರಿಂದ ಪ್ರಶಂಸೆ ಪಡೆಯುತ್ತಿದ್ದಾರೆ. ಸಾರ್ವಜನಿಕರು ಒಂದು ಕಾಲದಲ್ಲಿ ಪೂಜಿಸಿ ಆರಾಧಿಸಿ ಇನ್ನು ಬೆಡವೆಂದು ಎಸೆದ ದೇವರ ಹಳೆಯ ಫೋಟೋಗಳು, ಒಡೆದ ಗ್ಲಾಸಿನ ಫ್ರೇಮ್ ಗಳು, ಭಿನ್ನವಾದ ಮೂರ್ತಿಗಳು, ತುಕ್ಕು […]