ಫೆ.24ರಂದು ‘ಆಜಾದ್ ಹಿಂದ್ – ಶಿವಾಜಿಯಿಂದ ನೇತಾಜಿವರೆಗೆ’ ಕಾರ್ಯಕ್ರಮ: ಅಜಿತ್ ಹನುಮಕ್ಕನವರ್ ಭಾಗಿ

ಉಡುಪಿ: ಉಡುಪಿಯ ಕೂರ್ಮ ಫೌಂಡೇಶನ್ ಆಶ್ರಯದಲ್ಲಿ ಫೆ.24ರಂದು ‘ಆಜಾದ್ ಹಿಂದ್ – ಶಿವಾಜಿಯಿಂದ ನೇತಾಜಿವರೆಗೆ’ ಕಾರ್ಯಕ್ರಮ ಉಡುಪಿ ಅಜ್ಜರಕಾಡು ಪುರಭವನದಲ್ಲಿ ಸಂಜೆ 5 ಗಂಟೆಯಿಂದ ನಡೆಯಲಿದೆ ಎಂದು ಕೂರ್ಮ ಫೌಂಡೇಶನ್ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದರು. ಗುರುವಾರ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಜಾದ್ ಹಿಂದ್ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಮಹಾರಾಷ್ಟ್ರದ ಪ್ರಖ್ಯಾತ ವಾಗ್ಮಿ ಸಂದೀಪ್ ಮಹಿಂದ್ ಹಾಗೂ ರಾಷ್ಟ್ರೀಯವಾದಿ ಪತ್ರಕರ್ತ ಅಜಿತ್ ಹನುಮಕ್ಕನವರ್ ಅವರು ಭಾಗವಹಿಸಲಿದ್ದಾರೆ. ಗಾಯಕ ರಜತ್ ಮಯ್ಯ ಮತ್ತು ತಂಡದಿಂದ ರಾಷ್ಟ್ರಗೀತೆಗಳು […]

ಯುಕೆ ಯಿಂದ ತಾಯ್ನಾಡಿಗೆ ಮರಳಲಿದೆ ಛತ್ರಪತಿ ಶಿವಾಜಿ ಮಹಾರಾಜರ ‘ವಾಘ್ ನಖ್’ ಕಠಾರಿ: ತಿಳುವಳಿಕೆ ಒಪ್ಪಂದಕ್ಕೆ ಶೀಘ್ರ ಅಂಕಿತ

ನವದೆಹಲಿ: ಬಿಜಾಪುರ ಸುಲ್ತಾನರ ಸೇನಾಪತಿಯನ್ನು ಕೊಲ್ಲಲು ಛತ್ರಪತಿ ಶಿವಾಜಿ ಮಹಾರಾಜರು ಬಳಸಿದ ‘ವಾಘ್ ನಖ್’ (ಹುಲಿಯ ಉಗುರಿನಂತಹ ಆಯುಧ) ಅನ್ನು ಹಿಂದಿರುಗಿಸಲು ಯುಕೆ ಅಧಿಕಾರಿಗಳು ಒಪ್ಪಿಕೊಂಡ ನಂತರ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲು ರಾಜ್ಯ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ್ ಮುಂಗಂಟಿವಾರ್ ಈ ತಿಂಗಳ ಕೊನೆಯಲ್ಲಿ ಲಂಡನ್‌ಗೆ ಭೇಟಿ ನೀಡಲಿದ್ದಾರೆ. ವಾಘ್ ನಖ್ ಹುಲಿ ಉಗುರುಗಳ ಆಕಾರದ ಕಠಾರಿಯಾಗಿದ್ದು, ಛತ್ರಪತಿ ಶಿವಾಜಿ ಮಹಾರಾಜರು 1659 ರಲ್ಲಿ ಬಿಜಾಪುರ ಸುಲ್ತಾನರ ಸೇನಾಪತಿ ಅಫ್ಜಲ್ […]

ಕೊಡವೂರು ವಾರ್ಡ್ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಆಚರಣೆ

ಕೊಡವೂರು: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆಯ ನಿಮಿತ್ತ ಕೊಡವೂರು ವಾರ್ಡಿನ ಶಿವಾಜಿ ಪಾರ್ಕ್ ನಿರ್ಮಾಣ ಸಮಿತಿ ವತಿಯಿಂದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಿಜಯ್ ಕೊಡವೂರು, ಪವಿತ್ರ ಹಿಂದೂ ಧರ್ಮವನ್ನು ಅನ್ಯ ಮತದವರು ಮತಾಂತರ ಮಾಡುವ ಮೂಲಕ ನಮ್ಮ ಧರ್ಮವನ್ನು ನಿಂದಿಸುವ ಕಾರ್ಯ ಮಾಡುತ್ತಿದ್ದಾರೆ. ಹಿಂದೂ ಧರ್ಮ ಹಿಂದೂ ದೇವರು ಹಿಂದೂ ದೈವಗಳು ಸರಿ ಇಲ್ಲ ಅದರ ಆಚಾರ ವಿಚಾರಗಳು ಸರಿ ಇಲ್ಲ ಅದರ ಪದ್ಧತಿಗಳು ಸರಿ ಇಲ್ಲ ಎಂದು […]

ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಆಚರಣೆ

ಕೊಡವೂರು: ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ 393 ನೇ ಜಯಂತಿ ಆಚರಣೆ ಹಾಗೂ ಕಾರ್ಯಕರ್ತರ ಅಭಿನಂದನಾ ಸಭೆಯು ಫೆ.26 ರಂದು 9.30 ಕ್ಕೆ ಕೊಡವೂರು ವಿಪ್ರಶ್ರೀ ಸಭಾಭವನದಲ್ಲಿ ಜರಗಲಿದೆ ಎಂದು ನಗರಸಭಾ ಸದಸ್ಯ ವಿಜಯ್ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಕಳ: ಛತ್ರಪತಿ ಶಿವಾಜಿ ಮಹಾರಾಜರ 12 ಅಡಿ ಪುತ್ಥಳಿ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ

ಕಾರ್ಕಳ: ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಬೆಂಗಳೂರು ಇದರ ಕಾರ್ಕಳ ತಾಲೂಕು ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಕಳ ಬೈಪಾಸ್ ರಸ್ತೆ ಶ್ರೀ ಭವಾನಿ ಮಿಲ್ ಬಳಿ ಛತ್ರಪತಿ ಶಿವಾಜಿ ಮಹಾರಾಜರ 12 ಅಡಿ ಎತ್ತರದ ಪುತ್ಥಳಿಯುಳ್ಳ ವೃತ್ತ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವು ಶನಿವಾರದಂದು ನಡೆಯಿತು. ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದರು. ಕಾರ್ಯಕ್ರಮದ ಅಂಗವಾಗಿ ಬೈಕ್ ಜಾಥಾ ನಡೆಯಿತು. ಕೃಪೆ: ವಿ. ಸುನಿಲ್ ಕುಮಾರ್/ಟ್ವಿಟರ್