ಅಂಧತ್ವವನ್ನು ಮೀರಿ ನಿಂತ ಬಡಿಗೇರ ಸಹೋದರರು: ಕಣ್ಣಿಲ್ಲದಿದ್ದರೂ ರಥ ನಿರ್ಮಾಣ ಮಾಡಿ ಸೈ ಎನಿಸಿಕೊಂಡರು

ಕೊಪ್ಪಳ: ಸಾಧಿಸುವ ಛಲವೊಂದಿದ್ದರೆ ಸಾಧನೆಗೆ ಯಾವುದೂ ಅಡ್ಡಿಯಾಗುವುದಿಲ್ಲ. ಕೊಪ್ಪಳ ತಾಲೂಕಿನ ರಮೇಶ ಮತ್ತು ಸುರೇಶ ಬಡಿಗೇರ ಎನ್ನುವ ಸಹೋದರರಿಬ್ಬರು ಇದಕ್ಕೆ ಜ್ವಲಂತ ಉದಾಹರಣೆ. ಕೊಪ್ಪಳದ ಈ ಪ್ರತಿಭಾವಂತ ಜೋಡಿ ರಾತ್ರಿಗುರುಡುತನದಿಂದ ಬಳಲುತ್ತಿದ್ದರೂ, ಇಲ್ಲಿನ ಆಂಜನೇಯ ದೇವಸ್ಥಾನಕ್ಕೆ 29 ಅಡಿ ಎತ್ತರದ ಅತ್ಯಂತ ಸುಂದರವಾದ ರಥವನ್ನು ನಿರ್ಮಿಸಿ, ಕಣ್ಣಿದ್ದವರೆಲ್ಲಾ ಬೆಕ್ಕಸ ಬೆರಗಾಗುವಂತೆ ಮಾಡಿದ್ದಾರೆ. ಹುಟ್ಟಿಸಿದ ದೇವರು ಕಣ್ಣಿಗೆ ಬೆಳಕು ನೀಡದಿದ್ದರೂ, ತಮ್ಮ ಅಂಧತ್ವವನ್ನೂ ಮೀರಿ ಆ ದೇವರಿಗೆ ಸಮರ್ಪಣೆ ಮಾಡುವ ರಥವನ್ನು ನಿರ್ಮಾಣ ಮಾಡಿದ ಜೋಡಿಯ ಜೀವನವೆ ಒಂದು […]