ಚಂದ್ರಯಾನ-3 ಬಾಹ್ಯಾಕಾಶ ನೌಕೆಯಿಂದ ಚಂದ್ರನ ಚಿತ್ರವನ್ನು ಹಂಚಿಕೊಂಡ ಇಸ್ರೋ

ಆಗಸ್ಟ್ 5 ರಂದು ಚಂದ್ರನ ಆರ್ಬಿಟ್ ಅಳವಡಿಕೆಯ (LOI) ಸಮಯದಲ್ಲಿ ಚಂದ್ರಯಾನ-3 ಬಾಹ್ಯಾಕಾಶ ನೌಕೆಯಿಂದ ವೀಕ್ಷಿಸಿದ ಚಂದ್ರನ ಚಿತ್ರವನ್ನು ಇಸ್ರೋ ಹಂಚಿಕೊಂಡಿದೆ. ಶನಿವಾರದಂದು ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಕಕ್ಷೆಯನ್ನು ಪ್ರವೇಶಿಸಿದೆ. https://twitter.com/i/status/1688215948531015681

ಭೂಮಿಯ ಕಕ್ಷೆ ತೊರೆದು ಚಂದ್ರನ ಕಕ್ಷೆಗೆ ಜಿಗಿದ ಚಂದ್ರಯಾನ: ಮುಂದಿನ ನಿಲ್ದಾಣ ಚಂದ್ರನ ಅಂಗಳ

ಶ್ರೀಹರಿಕೋಟಾ: ಇಲ್ಲಿನ ಉಪಗ್ರಹ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾದ ಹದಿನೈದು ದಿನಗಳ ನಂತರ, ಚಂದ್ರಯಾನ -3 ಭೂಮಿಯ ಸುತ್ತ ತನ್ನ ಕಕ್ಷೆಯನ್ನು ಪೂರ್ಣಗೊಳಿಸಿದೆ ಮತ್ತು ಮಿಷನ್‌ನ ಮುಂದಿನ ಹಂತಕ್ಕೆ ಚಂದ್ರನ ಕಡೆಗೆ ಹೊರಟಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ತಡರಾತ್ರಿ ಘೋಷಿಸಿದೆ. ISTRAC ನಲ್ಲಿ ನಡೆಸಿದ ಯಶಸ್ವಿ ಪೆರಿಜಿ-ಫೈರಿಂಗ್, ಇಸ್ರೋ(ISRO) ಬಾಹ್ಯಾಕಾಶ ನೌಕೆಯನ್ನು ಟ್ರಾನ್ಸ್‌ಲೂನಾರ್ ಕಕ್ಷೆಗೆ ನೂಕಿದೆ. ಇನ್ನು ಮುಂದಿನ ನಿಲ್ದಾಣ ಚಂದ್ರ. ಇದು ಚಂದ್ರನತ್ತ ಆಗಮಿಸುತ್ತಿದ್ದಂತೆ, ಚಂದ್ರ-ಕಕ್ಷೆಯ ಒಳಸೇರಿಸುವಿಕೆಯನ್ನು (LOI) ಆಗಸ್ಟ್ […]

ಚಂದ್ರಯಾನ-3ರ ಹಿಂದಿದ್ದಾರೆ ಭಾರತದ ‘ರಾಕೆಟ್ ಮಹಿಳೆ’ ಎಂದು ಖ್ಯಾತಿವೆತ್ತ ರಿತು ಕರಿದಾಲ್ ಶ್ರೀವಾಸ್ತವ

ಶ್ರೀಹರಿಕೋಟಾ: ಭಾರತದ ಮೂರನೇ ಚಂದ್ರಯಾನ ಅಭಿಯಾನ ‘ಚಂದ್ರಯಾನ-3’ ಶುಕ್ರವಾರ ಮಧ್ಯಾಹ್ನ 2.35ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ಚಂದ್ರಯಾನ-3 ರ ಹಿಂದಿರುವ ನಾರೀಶಕ್ತಿ ಭಾರತದ ಸ್ವಂತ ‘ರಾಕೆಟ್ ಮಹಿಳೆ’ ಎಂದೇ ಖ್ಯಾತರಾದ ರಿತು ಕರಿದಾಲ್ ಶ್ರೀವಾಸ್ತವ. ಮಹಿಳಾ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್) ಪ್ರಕಾರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯಲ್ಲಿ ರಿತು ಕರಿದಾಲ್ ಶ್ರೀವಾಸ್ತವ ಅವರು ಹಿರಿಯ ವಿಜ್ಞಾನಿಯಾಗಿದ್ದು, ಮಾರ್ಸ್ ಆರ್ಬಿಟರ್ ಮಿಷನ್ ಅನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. […]

ಚಂದ್ರನತ್ತ ಪಯಣಿಸಿದ ಚಂದ್ರಯಾನ-3; ಆಗಸ್ಟ್ ವೇಳೆಗೆ ಚಂದ್ರನ ಮೇಲ್ಮೈಗೆ ಪಾದಾರ್ಪಣೆ ಮಾಡಲಿದೆ ವಿಕ್ರಮ್ ಲ್ಯಾಂಡರ್

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಮೂನ್ ಮಿಷನ್ ಅನ್ನು ಪ್ರಾರಂಭಿಸಿದೆ. ಚಂದ್ರಯಾನ-3 ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ಅನ್ನು ಹೊಂದಿದೆ. ಇದು ಸುಮಾರು 3,900 ಕಿಲೋಗ್ರಾಂಗಳಷ್ಟು ತೂಗುತ್ತದೆ. ಚಂದ್ರನ ಮೇಲೆ ಪಾದಾರ್ಪಣೆ ಮಾಡುವ ಭಾರತದ ಎರಡನೇ ಪ್ರಯತ್ನ ಇದಾಗಿದೆ. ಕೌಂಟ್‌ಡೌನ್‌ನ ಕೊನೆಯಲ್ಲಿ, ನಿಗದಿತ ಸಮಯದಲ್ಲಿ LVM3-M4 ರಾಕೆಟ್ ಭವ್ಯವಾಗಿ ಮೇಲಕ್ಕೆ ನೆಗೆದಿದೆ. ಲಿಫ್ಟ್-ಆಫ್ ಸಾಮಾನ್ಯ ಮತ್ತು ಸುಗಮವಾಗಿತ್ತು ಎಂದು ಇಸ್ರೋ ಹೇಳಿದೆ. ಬೇರ್ಪಡಿಕೆಯ ಹಂತಗಳನ್ನು […]

ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ: ಜುಲೈ 13 ರಂದು ಉಡಾವಣೆ ಸಾಧ್ಯತೆ; ಆಗಸ್ಟ್ ನಲ್ಲಿ ಚಂದನ ದಕ್ಷಿಣ ಧ್ರುವದ ಮೇಲೆ ಪಾದಾರ್ಪಣೆ!!

ಶ್ರೀಹರಿಕೋಟಾ: ಭಾರತದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ GSLV ಮಾರ್ಕ್ 3 ಹೆವಿ ಲಿಫ್ಟ್ ಉಡಾವಣಾ ವಾಹನದಲ್ಲಿ ಚಂದ್ರಯಾನ 3 ಮಿಷನ್ ಪ್ರಸ್ತುತ ಜುಲೈ 13 ರಂದು 9:00 UT (ಭಾರತದ ಪ್ರಮಾಣಿತ ಸಮಯ ಮಧ್ಯಾಹ್ನ 2:30) ಕ್ಕೆ ಉಡಾವಣೆಗೊಳ್ಳುವ ಸಾಧ್ಯತೆ ಇದೆ. ಜುಲೈ 19 ರವರೆಗಿನ ಬಫರ್ ಸಮಯವನ್ನು ನಿಗದಿಪಡಿಸಲಾಗಿದೆ. ಇಂದು ಮುಂಜಾನೆ, SDSC-SHAR ನಲ್ಲಿ, LVM3 M4 ವಾಹನವು ಚಂದ್ರಯಾನ-3 ನೊಂದಿಗೆ ಉಡಾವಣಾ ಪ್ಯಾಡ್‌ಗೆ ತನ್ನ ಚಲನೆಯನ್ನು ಪ್ರಾರಂಭಿಸಿದೆ. pic.twitter.com/7V6nHsxE5V — ISRO […]