ಚಂದ್ರನ ಅಂಗಳಕ್ಕೆ ಕಾಲಿಟ್ಟ ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ !! ತ್ರಿವಿಕ್ರಮ ಸಾಧಿಸಿದ ಇಸ್ರೋ ವಿಜ್ಞಾನಿಗಳು!!

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ-3 ಚಂದ್ರನ ಮಿಷನ್ ಸಾಫ್ಟ್ ಲ್ಯಾಂಡ್‌ಗೆ ಮಾಡಿದೆ. ವಿಕ್ರಮ್ ಲ್ಯಾಂಡರ್ ಸಂಜೆ 6.04 ಕ್ಕೆ ಮೃದುವಾದ ಚಂದ್ರನ ಲ್ಯಾಂಡಿಂಗ್ ಮಾಡಿದೆ. ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಪ್ರಧಾನಿ ಮೋದಿ ವರ್ಚುವಲ್ ಮೂಲಕ ಚಂದ್ರಯಾನವನ್ನು ವೀಕ್ಷಿಸಿ, ಈ ಸಾಧನೆಗಾಗಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. https://twitter.com/i/broadcasts/1vOGwMXPAwDxB ಇಡೀ ದೇಶವೇ ಈ ಸಾಧನೆಗಾಗಿ ಆನಂದಬಾಷ್ಫಗಳನ್ನು ಸುರಿಸಿ ವಿಜ್ಞಾನಿಗಳನ್ನು ಅಭಿನಂದಿಸುತ್ತಿದೆ. ಚಂದ್ರಯಾನ 3ರ ನೇರ ಪ್ರಸಾರವನ್ನು 3.4 […]

ಚಂದ್ರಯಾನ-3 ಲ್ಯಾಂಡಿಂಗ್ ಕಾರ್ಯಕ್ರಮ ನೇರ ಪ್ರಸಾರಕ್ಕಾಗಿ ಮಾಧ್ಯಮಗಳಿಗೆ ಆಹ್ವಾನವಿತ್ತ ISRO

ಬೆಂಗಳೂರು: ಚಂದ್ರಯಾನ -3 ಪ್ರಪಂಚದಾದ್ಯಂತ ವಿಶೇಷ ಕುತೂಹಲವನ್ನು ಹುಟ್ಟುಹಾಕಿದ್ದು, 140 ಕೋಟಿ ಭಾರತೀಯರು ಆ.23 ರಂದು ಚಂದ್ರನ ಅಂಗಳವನ್ನು ಮೊದಲ ಬಾರಿಗೆ ನೋಡುವ ತವಕದಲ್ಲಿದ್ದಾರೆ. ದೇಶದ ಮಾಧ್ಯಮಗಳೂ ಚಂದ್ರಯಾನ-3 ರ ಕ್ಷಣ ಕ್ಷಣದ ಮಾಹಿತಿಯನ್ನು ನೀಡುತ್ತಿವೆ. ಈ ಬಗ್ಗೆ ಇಸ್ರೋ ಟ್ವೀಟ್ ಮಾಡಿದ್ದು, ಮಾಧ್ಯಮಗಳಿಗೆ ಚಂದ್ರಯಾನ-3 ಲ್ಯಾಂಡಿಗ್ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡುವ ಆಹ್ವಾನ ನೀಡಿದೆ. “ದೇಶಾದ್ಯಂತ ಮಾಧ್ಯಮಗಳು ತೋರಿಸಿದ ಆಸಕ್ತಿಯ ಆಧಾರದ ಮೇಲೆ ಚಂದ್ರಯಾನ-3 ಲ್ಯಾಂಡಿಂಗ್ ಕಾರ್ಯಕ್ರಮವನ್ನು ಉಪಗ್ರಹ ನಿಯಂತ್ರಣ ಕೇಂದ್ರ (SCC) ಕಟ್ಟಡ, ISRO […]

ಚಂದ್ರ ಇನ್ನು ನಮಗೆ ಹತ್ತಿರ!! ವಿಕ್ರಂ ಲ್ಯಾಂಡರ್ ಬೇರ್ಪಡಿಸುವಿಕೆ ಯಶಸ್ವಿ

ಭಾರತದ ಬಹುನಿರೀಕ್ಷಿತ ಚಂದ್ರಯಾನ – 3 ಮಿಷನ್‌ಗೆ ದೊಡ್ಡ ಯಶಸ್ಸು ಸಿಕ್ಕಿದ್ದು, ವಿಕ್ರಂ ಲ್ಯಾಂಡರ್‌ ನೌಕೆಯಿಂದ ಯಶಸ್ವಿಯಾಗಿ ಬೇರ್ಪಟ್ಟಿದೆ. ಈ ಮೂಲಕ ವಿಕ್ರಂ ಲ್ಯಾಂಡರ್‌ ಚಂದ್ರನ ಅಂಗಳಕ್ಕೆ ಇಳಿಯಲು ಇನ್ನೊಂದೇ ಹೆಜ್ಜೆ ಬಾಕಿ ಇದೆ. ಮುಂದಿನ ಬುಧವಾರ ಆಗಸ್ಟ್‌ 23 ರಂದು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಕಾಲಿಡುವ ನಿರೀಕ್ಷೆ ಇದೆ. ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ ಇಸ್ರೋ “LM ಅನ್ನು ಪ್ರೊಪಲ್ಷನ್ ಮಾಡ್ಯೂಲ್ (PM) ನಿಂದ ಯಶಸ್ವಿಯಾಗಿ ಬೇರ್ಪಡಿಸಲಾಗಿದೆ. ನಾಳೆಗೆ ಯೋಜಿಸಲಾದ ಡೀಬೂಸ್ಟಿಂಗ್ ಮೇಲೆ […]

ಇನ್ನು ಎಂಟು ದಿನ ಬಾಕಿ: ಚಂದ್ರಯಾನ-3 ಕ್ಕೊಂದು ಬಾಹ್ಯಾಕಾಶದ ಪ್ರತಿಸ್ಪರ್ಧಿ ರಶ್ಯಾದ ಲೂನಾ-25!!

ಅನಿರೀಕ್ಷಿತ ಬಾಹ್ಯಾಕಾಶ ಓಟದಲ್ಲಿ, ಭಾರತ ಮತ್ತು ರಷ್ಯಾ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ವಿಶ್ವದ ಪ್ರಥಮ ರಾಷ್ಟ್ರವಾಗಲು ಪೈಪೋಟಿ ನಡೆಸುತ್ತಿವೆ. ರಷ್ಯಾ ಕಳೆದ ವಾರ ಲೂನಾ-25 ಮೂನ್ ಮಿಷನ್ ಅನ್ನು ಪ್ರಾರಂಭಿಸಿದ್ದು, ಇದು ಚಂದ್ರನನ್ನು ಭಾರತದ ಚಂದ್ರಯಾನ -3 ಕ್ಕೂ ಮುಂಚೆ ತಲುಪಬಹುದು ಎಂದು ಅಂದಾಜಿಸಲಾಗಿದೆ. ಚಂದ್ರಯಾನ-3 ರ ನಂತರ ಲೂನಾ-25 ಅನ್ನು ಉಡಾವಣೆ ಮಾಡಲಾಗಿದ್ದರೂ, ಅದು ಎರಡು ದಿನಗಳ ಮುನ್ನವೇ ಚಂದ್ರನ ಮೇಲೆ ಇಳಿಯಬಹುದು ಎನ್ನಲಾಗಿದೆ.   ಲೂನಾ -25 ರ ನಿಗದಿತ ಲ್ಯಾಂಡಿಂಗ್ ಆಗಸ್ಟ್ […]

ಚಂದ್ರಯಾನ-3 ರ ಚಿತ್ರ ರಚಿಸಿ ಸ್ವಾತಂತ್ರ್ಯ ದಿನವನ್ನು ವಿಶಿಷ್ಟವಾಗಿಸಿದ ನ್ಯೂ ಫ್ರೆಂಡ್ಸ್ ಕಬ್ಬೆಟ್ಟು

ಉಡುಪಿ: ಅಂಬಲಪಾಡಿಯ ನ್ಯೂ ಫ್ರೆಂಡ್ಸ್ ಕಬ್ಬೆಟ್ಟು ಇವರು ಪ್ರತೀ ಬಾರಿಯಂತೆ ಈ ಬಾರಿಯೂ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದು, ಈ ಬಾರಿ 76ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಚಂದ್ರಯಾನ- 3 ರ ಚಿತ್ರ ರಚಿಸಿ ಜನಮನ್ನಣೆ ಗಳಿಸಿದ್ದಾರೆ. ಕಲಾರಚನೆಯಲ್ಲಿ ಸುಧಾಕರ್, ದಯಾನಂದ, ಹರೀಶ್ ಸಹಕರಿಸಿದ್ದಾರೆ.