ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ ಬ್ಯಾಂಕ್ ಅಫ್ ಬರೋಡಾದಿಂದ ಜಾಗರೂಕತಾ ಸಪ್ತಾಹ

ಮಂಗಳೂರು: ಸೆಂಟ್ರಲ್ ವಿಜಿಲೆನ್ಸ್ ಆಯೋಗದ ನಿರ್ದೇಶನದಂತೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಸ್ಮರಣಾರ್ಥ ಬ್ಯಾಂಕ್ ಆಫ್ ಬರೋಡಾ ಮಂಗಳೂರು ವಲಯವು ಅಕ್ಟೋಬರ್ 31 ರಿಂದ ನವೆಂಬರ್ 06 ರವರೆಗೆ ವಿಜಿಲೆನ್ಸ್ ಜಾಗೃತಿ ಸಪ್ತಾಹವನ್ನು ಆಚರಿಸುತ್ತಿದೆ. ಈ ಸಂಬಂಧವಾಗಿ ನ.06 ರವರೆಗೆ ಬ್ಯಾಂಕ್‌ ನ ಎಲ್ಲಾ ಪಾಲುದಾರರೊಡಗೂಡಿ ಭ್ರಷ್ಟಾಚಾರವನ್ನು ತಡೆಗಟ್ಟಲು ಮತ್ತು ಅದರ ವಿರುದ್ಧ ಹೋರಾಡಲು ವಿವಿಧ ಚಟುವಟಿಕೆಗಳನ್ನು ನಡೆಸಬೇಕಾಗಿದ್ದು, ಕಾರ್ಯಕ್ರಮದ ಅಂಗವಾಗಿ ಆದಿತ್ಯವಾರ ಮಂಗಳೂರಿನ ಪೊಲೀಸ್ ಉಪ ಆಯುಕ್ತ ಅಂಶು ಕುಮಾರ್ ರವರು ವಿಜಯ ಟವರ್ಸ್ […]