ಇಂದಿನಿಂದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪ್ರಾರಂಭ: ಬಂಗಾಳದ ಹುಲಿಗಳ ಜೊತೆ ಕರ್ನಾಟಕ ಬುಲ್ಡೋಜರ್ ಕಾದಾಟ
ಚಿತ್ರರಂಗದ ಪುರುಷರ ಹವ್ಯಾಸಿ ಕ್ರಿಕೆಟ್ ಲೀಗ್ ಎಂದು ಕರೆಯಲಾಗುವ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) 2023, ಫೆ.18 ರಂದು ಪ್ರಾರಂಭವಾಗಿ ಮಾರ್ಚ್ 19 ರಂದು ಕೊನೆಗೊಳ್ಳಲಿದೆ. ಸಿಸಿಎಲ್ ಭಾರತೀಯ ಚಿತ್ರರಂಗದ ಒಂಬತ್ತು ಪ್ರಮುಖ ಪ್ರಾದೇಶಿಕ ಚಲನಚಿತ್ರ ಉದ್ಯಮಗಳ ಒಂಬತ್ತು ಚಿತ್ರ ನಟರ ತಂಡಗಳನ್ನು ಒಳಗೊಂಡಿದೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಅನ್ನು 2011 ರಲ್ಲಿ ಪ್ರಾರಂಭಿಸಲಾಯಿತು. ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಲೀಗ್ ಪಂದ್ಯಗಳನ್ನು ಕೈಗೊಂಡಿರಲಿಲ್ಲ. ಇಂದು ಕರ್ನಾಟಕ ಬುಲ್ಡೋಜರ್ಸ್ ತಂಡವು ಬೆಂಗಾಲ್ ಟೈಗರ್ಸ್ ಗಳನ್ನು ಎದುರಿಸಲಿದೆ. […]