ಮಾರುಕಟ್ಟೆಗೆ ಬರಲಿದೆ ಗೇರು ಹಣ್ಣಿನ ವೈನ್‌! ತಂತ್ರಜ್ಞಾನಕ್ಕೆ ಪೇಟೆಂಟ್ ಪಡೆದ ಎನ್‌ಐಟಿಕೆ ಅಧ್ಯಾಪಕ

ಸುರತ್ಕಲ್: ಸುರತ್ಕಲ್‌ನ ಎನ್‌ಐಟಿಕೆ ಅಧ್ಯಾಪಕರೊಬ್ಬರು ಗೇರು ಹಣ್ಣು ಮತ್ತು ಒಣದ್ರಾಕ್ಷಿಗಳನ್ನು ಬಳಸಿ ವೈನ್ ಉತ್ಪಾದಿಸಲು ಪೇಟೆಂಟ್ ಪಡೆದಿದ್ದಾರೆ. ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ.ಪ್ರಸನ್ನ ಬೇಲೂರು ದೇವರಭಟ್ಟ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಪೇಟೆಂಟ್‌ಗೆ ‘ಗೋಡಂಬಿ ಸೇಬು ಮತ್ತು ಒಣದ್ರಾಕ್ಷಿಗಳಿಂದ ಆಲ್ಕೊಹಾಲ್ಯುಕ್ತ ಪಾನೀಯವನ್ನು ಉತ್ಪಾದಿಸುವ ಪ್ರಕ್ರಿಯೆ ಮತ್ತು ಅದರಿಂದ ಉತ್ಪತ್ತಿಯಾಗುವ ಆಲ್ಕೊಹಾಲ್ಯುಕ್ತ ಪಾನೀಯ’ ಎಂದು ಶೀರ್ಷಿಕೆ ನೀಡಲಾಗಿದೆ. 2012 ರಲ್ಲಿ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಲಾಗಿತ್ತು ಮತ್ತು ಮೇ 4, 2022 ರಂದು ಪೇಟೆಂಟ್ ದೊರಕಿದೆ. ಡಾ ಬೇಲೂರ್ […]