ರಾಷ್ಟ್ರಮಟ್ಟದ ಕಲೋತ್ಸವ- ಕರ್ನಾಟಕ ಶಾಸ್ತ್ರೀಯ ವಾದ್ಯ ಸಂಗೀತ ಸ್ಪರ್ಧೆ: ಕು.ಕಾದಂಬರಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ಉಡುಪಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವಾಲಯ, ಭಾರತ ಸರಕಾರ ಹಾಗೂ ಎನ್.ಸಿ.ಇ.ಆರ್.ಟಿ ನವದೆಹಲಿ ವತಿಯಿಂದ ನಡೆಸಲಾಗುವ ರಾಷ್ಟ್ರಮಟ್ಟದ ಕಲೋತ್ಸವ-2022 ರಲ್ಲಿ ಕುಮಾರಿ ಕಾದಂಬರಿ ಡಿ ಕರ್ನಾಟಕ ಶಾಸ್ತ್ರೀಯ ವಾದ್ಯ ಸಂಗೀತ ಸ್ಪರ್ಧೆ-ವೀಣಾ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ಒಡಿಸ್ಸಾದ ಭುವನೇಶ್ವರದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾಳೆ. ಕಾದಂಬರಿ ಮಣಿಪಾಲದ ಮಾಧವ ಕೃಪಾ ಆಂಗ್ಲ ಮಾಧ್ಯಮ ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಡಾ. ಗಾಯತ್ರಿ ಮತ್ತು ಡಾ ಶ್ರೀಧರ್ ಇವರ […]