26 ವರ್ಷದ ಕ್ಯಾಪ್ಟನ್ ಅಭಿಲಾಶಾ ಬರಾಕ್: ಭಾರತೀಯ ಸೇನೆಯ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್!

ನವದೆಹಲಿ: ಬುಧವಾರ, ಹರಿಯಾಣದ 26 ವರ್ಷದ ಕ್ಯಾಪ್ಟನ್ ಅಭಿಲಾಶಾ ಬರಾಕ್ ಭಾರತೀಯ ಸೇನೆಯ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್ ಆಗಿ ಹೊರಹೊಮ್ಮಿದ್ದಾರೆ. ನಾಸಿಕ್‌ನ ಯುದ್ಧ ಸೇನಾ ವಿಮಾನಯಾನ ತರಬೇತಿ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಕ್ಯಾಪ್ಟನ್ ಅಭಿಲಾಷಾ ಬರಾಕ್ ಪೈಲಟ್ ಪದವಿ ಪಡೆದರು. ಆರ್ಮಿ ಏವಿಯೇಷನ್‌ನ ಡಿಜಿ ಎ ಕೆ ಸೂರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕ್ಯಾಪ್ಟನ್ ಬರಾಕ್ ಸನಾವರ್‌ನ ಲಾರೆನ್ಸ್ ಶಾಲೆಯ ಹಳೆಯ ವಿದ್ಯಾರ್ಥಿ. ಅವರು 2016 ರಲ್ಲಿ ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಮತ್ತು […]