ಕೆನರಾ ರಿಟೈಲ್ ಎಕ್ಸ್ ಪೊ-2023 ಉದ್ಘಾಟನೆ

ಉಡುಪಿ: ಗೃಹ ಮತ್ತು ವಾಹನಗಳ ಬೃಹತ್ ಸಾಲಮೇಳ ಕೆನರಾ ರಿಟೈಲ್ ಎಕ್ಸ್ ಪೊ-2023 ಅನ್ನು ಇಲ್ಲಿನ ಎಂಜಿಎಂ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದು, ಶಾಸಕ ಯಶ್ ಪಾಲ್ ಸುವರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಗೌರವ ಅತಿಥಿಯಾಗಿ ಹೆಚ್ಚುವರಿ ಎಸ್ಪಿ ಎಸ್.ಟಿ ಸಿದ್ದಲಿಂಗಪ್ಪ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಕೆನರಾ ಬ್ಯಂಕಿನ ಜನರಲ್ ಮ್ಯಾನೇಜರ್ ಎಂಜಿ ಪಂಡಿತ್ ವಹಿಸಿದ್ದರು. ಡಿವಿಷನ್ ಮ್ಯಾನೇಜರ್ ಉಮೇಶ್ ಕೆ.ಆರ್, ಡೆಪ್ಯುಟಿ ಜನರಲ್ ಮ್ಯಾನೇಜರ್ ಶೀಬಾ ಸಹಾಜನ್, ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಡಿ.10-11 ರಂದು ಕೆನರಾ ಬ್ಯಾಂಕ್ ವತಿಯಿಂದ ಹೊಸವರ್ಷದ ಪ್ರಯುಕ್ತ ಕೆನರಾ ರಿಟೈಲ್ ಮೇಳ-2022

ಉಡುಪಿ: ಕೆನರಾ ಬ್ಯಾಂಕ್ ವತಿಯಿಂದ ಹೊಸವರ್ಷದ ಪ್ರಯುಕ್ತ ಕೆನರಾ ರಿಟೈಲ್ ಮೇಳ-2022 ಅನ್ನು ಡಿ.10 ಮತ್ತು 11 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಉಡುಪಿಯ ಎಂಜಿಎಂ ಕಾಲೇಜ್ ಗ್ರೌಂಡ್ ನಲ್ಲಿ ಆಯೋಜಿಸಲಾಗಿದೆ. ಆಕರ್ಷಣೆಗಳು: ಬ್ಯಾಂಕ್ ನಿಂದ ಮನೆ ಮತ್ತು ವಾಹನಗಳ ಸಾಲ ಸೌಲಭ್ಯ. ಪ್ರವೇಶ ಶುಲ್ಕ ಇಲ್ಲ. ಆಕರ್ಷಕ ದರದಲ್ಲಿ ಸುಲಭ ಸಾಲ. ಯಾವುದೇ ಜಾಮೀನು ಇಲ್ಲ, ಆದಾಯ ತೆರಿಗೆ ವಿನಾಯಿತಿ, ವಾಹನ ಸಾಲಕ್ಕೆ ಕೇವಲ 10% ಪಾವತಿ, ಉಳಿದ ಹಣವನ್ನು ಮಾಸಿಕ […]