ಕರಾವಳಿಯಿಂದ ಕ್ಯಾಲಿಫೋರ್ನಿಯಾದವರೆಗೆ ಕಾಂತಾರ ಕಂಪು: ಸೀಮೆಸುಣ್ಣ ಕಲೆಯಲ್ಲಿ ಮೂಡಿಬಂತು ಪಂಜುರ್ಲಿ ದೈವ

ಕರಾವಳಿಯ ದೈವಾರಾಧನೆಯ ಕಂಪು ದೂರದ ಕ್ಯಾಲಿಫೋರ್ನಿಯಾದಲ್ಲೂ ಪಸರಿಸಿದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಲಭ್ಯವಾಗಿದೆ. ಕ್ಯಾಲಿಫೋರ್ನಿಯಾದ ಫ್ರೀಮಾಂಟ್ ನಲ್ಲಿ ಸೀಮೆಸುಣ್ಣ(ಚಾಕ್)ದಲ್ಲಿ ಕಾಂತಾರಾ ಪಂಜುರ್ಲಿ ದೈವದ ಚಿತ್ರವು ಕಲಾವಿದೆಯ ಕೈಚಳಕದಲ್ಲಿ ಮೂಡಿಬಂದಿದೆ. ಈ ಪ್ರತಿಭಾವಂತ ಕಲಾವಿದೆಯ ಹೆಸರು ಶಿಲ್ಪಾ ಎಂದಾಗಿದ್ದು, ಅಮೇರಿಕಾ ಸಂಯುಕ್ತ ಸಂಸ್ಥಾನದ ಕ್ಯಾಲಿಫೋರ್ನಿಯಾದ ಫ್ರೀಮಾಂಟ್ ನಲ್ಲಿ ವಾಸಿಸುತ್ತಿದ್ದಾರೆ. ಈ ಚಿತ್ರವನ್ನು ಪ್ರದೀಪ್ ಗೌಡ ಎನ್ನುವ ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.