ಸಿಎ ಫೌಂಡೇಷನ್ ಪರೀಕ್ಷೆ: ಭೂಮಿಕಾ ಎಂ. ಉತ್ತೀರ್ಣ

ಮಂಗಳೂರು: ಹೊಸದಿಲ್ಲಿಯ ಲೆಕ್ಕ ಪರಿಶೋಧಕರ ಸಂಸ್ಥೆ (ICAI) ಡಿಸೆಂಬರ್ 2022ರಲ್ಲಿ ನಡೆದ ಸಿಎ ಫೌಂಡೇಷನ್ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿಯೇ ಭೂಮಿಕಾ ಎಂ. 344 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಇವರು ಸಿಎ ಫೌಂಡೇಷನ್ ತರಬೇತಿಯನ್ನು ಮಂಗಳೂರಿನ ತ್ರಿಶಾ ಕ್ಲಾಸಸ್‍ನಲ್ಲಿ ಹಾಗೂ ತ್ರಿಶಾ ಕಾಲೇಜ್ ಆಫ್ ಕಾಮರ್ಸ ಆಂಡ್ ಮ್ಯಾನೇಜಮೆಂಟ್‍ನಲ್ಲಿ ಬಿ.ಕಾಂ ಪದವಿಯ ವ್ಯಾಸಂಗವನ್ನು ನಡೆಸುತ್ತಿದ್ದಾರೆ. ಇವರು ಮಂಗಳೂರಿನ ಕೊಡಿಯಾಲ್ ಬೈಲ್‍ನ ಚಂದ್ರಹಾಸ ಎಂ. ಮತ್ತು ಲತಾ ಚಂದ್ರಹಾಸ ದಂಪತಿಯ ಪುತ್ರಿಯಾಗಿರುತ್ತಾರೆ.