ಹೆದ್ದಾರಿ ಸಮೀಪದ ಕಟ್ಟಡ ಕುಸಿತ: ಅವಶೇಷದಡಿ 35 ಮಂದಿ ಯೋಧರು !
ದೇಶ: ಕುಮಾರ್ ಹಟ್ಟಿ-ನಹಾನ್ ಹೆದ್ದಾರಿಯ ಸಮೀಪವಿರುವ ಬಹುಮಹಡಿ ಕಟ್ಟಡವೊಂದು ಭಾರಿ ಮಳೆಗೆ ಸಿಲುಕಿ ಭಾನುವಾರದಂದು ಕುಸಿತ ಕಂಡಿದೆ. 35 ಮಂದಿ ಯೋಧರು ಸೇರಿದಂತೆ ಅನೇಕ ಮಂದಿ ಸಿಲುಕಿರುವ ಗುಮಾನಿ ವ್ಯಕ್ತವಾಗಿದೆ. ಶಿಮ್ಲಾದಿಂದ 45 ಕಿ.ಮೀ ದೂರದಲ್ಲಿರುವ ಸೋಲಾನ್ ನಲ್ಲಿ ಕುಸಿದಿರುವ ಈ ಕಟ್ಟಡದಲ್ಲಿ ಸಿಲುಕಿದ್ದ 15 ಮಂದಿ ಯೋಧರನ್ನು ಸದ್ಯ ಬಚಾವ್ ಮಾಡಲಾಗಿದೆ. ರಾಷ್ಟ್ರೀಯ ವಿಪತ್ತು ನಿಯಂತ್ರಣ ತಂಡ(ಎನ್ ಡಿ ಆರ್ ಎಫ್) ತಂಡ ಸ್ಥಳದಲ್ಲಿ ಬೀಡುಬಿಟ್ಟಿದ್ದು, ವಿಪತ್ತು ನಿರ್ವಹಣಾ ಕಾರ್ಯ ಮುಂದುವರೆಸಿದ್ದರು. ಚಂಡೀಗಢ -ಶಿಮ್ಲಾ ರಾಷ್ಟ್ರೀಯ […]
ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಕಟ್ಟಡ ‘ಕದಿರು’ ಉದ್ಘಾಟನೆ
ಸಿದ್ದಾಪುರ: ಶತಮಾನೋತ್ಸವ ಸಂಭ್ರಮಾಚರಣೆಯ ಸಮೀಪದಲ್ಲಿರುವ ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಸ್ವಂತ ಬಂಡವಾಳದಿಂದ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡ ‘ಕದಿರು’ ಜೂ. 26ರಂದು ಉದ್ಘಾಟನೆ ಗೊಂಡಿತು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್ ನೂತನ ಕಟ್ಟಡ ಹಾಗೂ ಆಡಳಿತ ಮಂಡಳಿಯ ಸಭಾಂಗಣವನ್ನು ಉದ್ಘಾಟಿಸಿ ಶುಭಹಾರೈಸಿದರು. ವಿಧಾನ ಪರಿಷತ್‌ನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಬ್ಯಾಂಕಿಂಗ್ ವಿಭಾಗ ಮತ್ತು ಸಭಾ ಭವನ […]
ಉಡುಪಿ: ಇಂದ್ರಾಳಿ ದ್ವಿಚಕ್ರ ವಾಹನ ಶೋರೂಂಗೆ ಬೆಂಕಿ ಅವಘಡ: 5.75ಕೋ.ರೂ. ನಷ್ಟ
ಉಡುಪಿ: ಇಂದ್ರಾಳಿಯ ದ್ವಿಚಕ್ರ ವಾಹನಶೋರೂಂ ಇರುವ ಕಟ್ಟಡದಲ್ಲಿ ಜೂ.23ರಂದು ರಾತ್ರಿ ಸಂಭವಿಸಿದ ಬೆಂಕಿ ಅವಘಡದಿಂದ ನಾಲ್ಕು ಅಂಗಡಿಗಳಿಗೆ ಹಾನಿಯಾಗಿದ್ದು, ಒಟ್ಟು 5.75 ಕೋಟಿ ರೂ. ನಷ್ಟು ಉಂಟಾಗಿದೆ ಎನ್ನಲಾಗಿದೆ. ಜಯರಾಮ್ ಸುವರ್ಣ ಎಂಬವರ ಮೂರು ಅಂತಸ್ತಿನ ಎಆರ್‌ಜೆ ಆರ್ಕೆಡ್ ಕಟ್ಟಡದ ಕೆಳ, ಮೊದಲ ಮತ್ತು ಎರಡನೆ ಅಂತಸ್ತಿನಲ್ಲಿರುವ ಅವರದ್ದೆ ಮಾಲಕತ್ವದ ‘ಜೈದೇವ್ ಮೋಟೋ ರೆನ್’ ವೆಸ್ಪ ಮತ್ತು ಅಪ್ರಿಲ್ಲಾ ದ್ವಿಚಕ್ರ ವಾಹನಗಳ ಶೋರೂಂ, ಮೂರನೇ ಮಹಡಿಯಲ್ಲಿರುವ ಉಡುಪಿಯ ಸೌಜನ್ಯ ಶೆಟ್ಟಿ ಮಾಲಕತ್ವದ ವೇರ್‌ಹೌಸ್ ಜಿಮ್ ಸೆಂಟರ್ ಮತ್ತು […]