ಬ್ರೆಜಿಲ್​ ಅಧ್ಯಕ್ಷ : ‘ಆರ್​ಆರ್​ಆರ್​ ನನ್ನ ಮೆಚ್ಚಿನ ಚಿತ್ರ’ 

ಇದೀಗ ಬ್ರೇಜಿಲ್​ ಅಧ್ಯಕ್ಷ ಲೂಯಿಜ್​​ ಇನಾಸಿಯೋ ಲುಲಾ ಡಾ ಸಿಲ್ವಾ (Luiz Inácio Lula da Silva) ಸಿನಿಮಾ ಕುರಿತು ಮಾತನಾಡಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಂಭೆ​ಯಲ್ಲಿ ಭಾಗಿಯಾಗಿರುವ ಬ್ರೆಜಿಲ್​​ ಅಧ್ಯಕ್ಷರು ಆರ್​ಆರ್​ಆರ್​ ವಿಷಯ ಪ್ರಸ್ತಾಪಿಸಿದ್ದಾರೆ. ಇದು ನನ್ನ ಮೆಚ್ಚಿನ ಭಾರತೀಯ ಸಿನಿಮಾ. ಚಿತ್ರ ಅದ್ಭುತವಾಗಿದೆ ಎಂದು ಚಿತ್ರತಂಡವನ್ನು ಶ್ಲಾಘಿಸಿದ್ದಾರೆ. ಸಿನಿ ಗಣ್ಯರು ಮಾತ್ರವಲ್ಲದೇ ಕ್ರೀಡಾಪಟುಗಳು, ರಾಜಕಾರಣಿಗಳೂ ಸೇರಿದಂತೆ ವಿಭಿನ್ನ ಕ್ಷೇತ್ರಗಳ ಗಣ್ಯರು ಆರ್​ಆರ್​ಆರ್ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ‘RRR’…ವಿಶೇಷ ಪರಿಚಯ ಬೇಕಿಲ್ಲ. ಭಾರತ ಮಾತ್ರವಲ್ಲದೇ ಜಾಗತಿಕ […]