ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವು ಕೊಲೆಯಲ್ಲ, ಆತ್ಮಹತ್ಯೆ: ಡಾ. ಸುಧೀರ್ ಗುಪ್ತಾ

ನವದೆಹಲಿ: ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಕೊಲೆಯಲ್ಲ, ಆತ್ಮಹತ್ಯೆಯಿಂದಲೇ ಸಾವು ಸಂಭವಿಸಿದೆ. ವಿಷ ನೀಡಿ ಅಥವಾ ಕತ್ತು ಹಿಸುಕಿ ಕೊಲೆ ನಡೆದಿಲ್ಲ ಎಂದು ಏಮ್ಸ್‌ನ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಸುಧೀರ್ ಗುಪ್ತಾ ತಿಳಿಸಿದರು. ಆರು ಸದಸ್ಯರ ವಿಧಿವಿಜ್ಞಾನ ವೈದ್ಯರಿರುವ ತಂಡವು ಸುಶಾಂತ್ ಸಿಂಗ್ ಸಾವು ಕೊಲೆಯಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ. ಅಲ್ಲದೆ, ಈ ಮಾಹಿತಿಯನ್ನು ಏಮ್ಸ್‌ನ ವೈದ್ಯಕೀಯ ತಂಡವು ಸಿಬಿಐಗೆ ಇರಿಸಿದೆ. ಇದು ನೇಣು ಹಾಕಿಕೊಂಡ ಪ್ರಕರಣ ಹಾಗೂ ಆತ್ಮಹತ್ಯೆಯಿಂದಲೇ ಸಾವು ಸಂಭವಿಸಿದೆ. ನಮ್ಮ ಅಂತಿಮ ವರದಿಯನ್ನು […]