ಉಚ್ಚಿಲ: ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಮುಳುಗಡೆ; ಆರು ಲಕ್ಷ ರೂ ಗೂ ಅಧಿಕ ನಷ್ಟ

ಪಡುಬಿದ್ರೆ: ಇಲ್ಲಿಗೆ ಸಮೀಪದ ಉಚ್ಚಿಲದಲ್ಲಿ ಮೀನುಗಾರಿಕೆಗೆಂದು ತೆರಳಿದ್ದ ದೋಣಿಯೊಂದು ಪ್ರಕ್ಷುಬ್ದ ಸಮುದ್ರದ ಅಲೆಗಳಿಗೆ ಸಿಲುಕಿ ಮುಳುಗಡೆಯಾಗಿರುವ ಘಟನೆ ಸೋಮವಾರದಂದು ನಡೆದಿದೆ. ಉಚ್ಚಿಲ ನಿವಾಸಿ ವಿಮಲಾ ಸಿ ಪುತ್ರನ್ ರವರಿಗೆ ಸೇರಿದ ಶ್ರೀ ಗಿರಿಜಾ ಎನ್ನುವ ದೋಣಿಯಲ್ಲಿ ಮೀನುಗಾರರು ಮೀನು ಹಿಡಿಯಲು ಹೋಗಿದ್ದ ಸಂದರ್ಭದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಕಡಲು ಪ್ರಕ್ಷುಬ್ದಗೊಂಡು ದೋಣಿ ಮಗುಚಿ ಬಿದ್ದಿದೆ. ಇದನ್ನು ಕಂಡ ಅಲ್ಲೇ ಸಮೀಪದಲ್ಲಿದ್ದ ಮೀನುಗಾರರು ದೋಣಿಯಲ್ಲಿದ್ದ ಮೀನುಗಾರರ ನೆರವಿಗೆ ಧಾವಿಸಿ ಏಳು ಮಂದಿ ಮೀನುಗಾರರನ್ನು ರಕ್ಷಿಸಿದ್ದಾರೆ. ದೋಣಿ ಮುಳುಗಡೆಯಾದ್ದರಿಂದ ದೋಣಿಯಲ್ಲಿದ್ದ ಬಲೆ […]

ಮಲ್ಪೆ: ಬೋಟಿನಿಂದ ಕಾಲು ಜಾರಿ ಬಿದ್ದು ಮೀನುಗಾರ ಮೃತ್ಯು

ಮಲ್ಪೆ: ಬೋಟಿನಿಂದ ಕಾಲು ಜಾರಿ ನೀರಿಗೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಬಂದರಿನಲ್ಲಿ ನಡೆದಿದೆ. ಮೃತರನ್ನು ಕಟಪಾಡಿ ಮಟ್ಟು ನಿವಾಸಿ ಸಂತೋಷ್ ತಿಂಗಳಾಯ (35) ಎಂದು ಗುರುತಿಸಲಾಗಿದೆ. ಇವರು ಮಲ್ಪೆಯ ಬಲರಾಮ್ ಪರ್ಸಿನ್ ಬೋಟು ಬಂದರಿನ ಒಳಗೆ ಬರುವಾಗ, ಕಾಲು ಜಾರಿ ನೀರಿಗೆ ಬಿದ್ದರೆನ್ನಲಾಗಿದೆ. ಇವರನ್ನು ಕೂಡಲೇ ಮೇಲಕ್ಕೆ ಎತ್ತಿ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಿ ಟೂರಿಸ್ಟ್ ಬೋಟ್ ಸ್ಥಗಿತ

ಉಡುಪಿ, ಮೇ 14: ಮಲ್ಪೆ ಬೀಚ್‍ನಿಂದ ಹಾಗೂ ಮಲ್ಪೆ ಬಂದರಿನಿಂದ ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರಯಾಣಿಸುವ ಬೋಟ್‍ಗಳಿಗೆ ಮತ್ತು ಮಲ್ಪೆ ಬೀಚ್‍ನಲ್ಲಿ ಜಲಕ್ರೀಡಾ ಚಟುವಟಿಕೆ ನಡೆಸುವ ಎಲ್ಲಾ ಪ್ರವಾಸಿ ಬೋಟ್‍ಗಳಿಗೆ ಪ್ರತಿ ವರ್ಷದಂತೆ ಮೇ 16 ರಿಂದ ಸೆಪ್ಟೆಂಬರ್ 15 ರ ವರೆಗೆ ಬೋಟ್ ಚಲಾಯಿಸಲು ಅನುಮತಿ ಇರುವುದಿಲ್ಲ ಎಂದು ಮಲ್ಪೆ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಹಾಗೂ ಉಡುಪಿ ನಗರಸಭೆ ಪೌರಾಯುಕ್ತ ಆನಂದ ಚಿ. ಕಲ್ಲೋಳಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.