ಕರಾವಳಿಯ ಯಕ್ಷಗಾನ ಕಲೆಯಲ್ಲೂ ರಾಜಕೀಯ ಬೆರೆಸಿರುವ ಬಿಜೆಪಿ ನಡೆ ಖಂಡನೀಯ: ರಮೇಶ್ ಕಾಂಚನ್

ಉಡುಪಿ: ರಾಜ್ಯ ಬಿಜೆಪಿ ಸರಕಾರವು 40% ಕಮಿಷನ್ ತಿಂದು ಅದೂ ಸಾಕಾಗದೆ ಈಗ ಇದ್ದ ಬದ್ದ ಎಲ್ಲಾ ಸಂಘ ಸಂಸ್ಥೆಗಳಿಗೂ ರಾಜಕೀಯ ಅಂಟಿಸುವ ಪರಿಪಾಠ ಬೆಳೆಸುತ್ತಿರುವುದು ಖಂಡನೀಯ. ಉಡುಪಿ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ ನಡೆಸುವ ಮೂಲಕ ಯಕ್ಷಗಾನ ರಂಗಕ್ಕೂ ರಾಜಕೀಯ ತಂದಿರುವುದು ಬೇಸರದ ಸಂಗತಿ. ಸಮಗ್ರ ಯಕ್ಷಗಾನ ಹೆಸರಲ್ಲಿ ಯಕ್ಷಗಾನದ ಸಮಗ್ರತೆಯನ್ನು ಮರೆತು ಸೀಮಿತಗೊಳಿಸಿರುವುದು ನ್ಯಾಯವೇ ? ನಮ್ಮ ರಾಜ್ಯದ ಸಂಸ್ಕೃತಿಕ ಜಾನಪದ ಕಲೆಯಾದ ಯಕ್ಷಗಾನ ಸಮ್ಮೇಳನದಲ್ಲಿ 90%ಕ್ಕೂ ಅಧಿಕ ರಾಜಕೀಯ ನಾಯಕರೇ […]

ಕಾಮಗಾರಿಗೆ ಪಿಕ್ಕಾಸು ಬೀಳಬೇಕಾದ್ರೆ ಮೊದಲು 40% ಕಮಿಷನ್ ಕೊಡಬೇಕು: ಬಿಜೆಪಿ ಸರಕಾರದ ವಿರುದ್ಧ ಸೊರಕೆ ವಾಗ್ದಾಳಿ

ಉಡುಪಿ: ರಸ್ತೆ ಸೇರಿದಂತೆ ಯಾವುದೇ ಅಭಿವೃದ್ಧಿ ಕಾಮಗಾರಿ ಆಗಬೇಕಾದ್ರೆ ಮೊದಲು 40 ಪರ್ಸೆಂಟ್ ಕಮಿಷನ್ ಪಾವತಿಸಬೇಕು. ಆದಾದ ಬಳಿಕವೇ ಕಾಮಗಾರಿಗೆ ಪಿಕ್ಕಾಸು ಬೀಳುವುದು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆರೋಪಿಸಿದರು. ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾಪು ವಿಧಾನಸಭಾ ಕ್ಷೇತ್ರಾದ್ಯಂತ ಹಮ್ಮಿಕೊಳ್ಳಲಾದ ಕರಾವಳಿ ಪ್ರಜಾಧ್ವನಿ ಯಾತ್ರೆಯ ಪ್ರಯುಕ್ತ ಆತ್ರಾಡಿಯಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ಯಾವುದೇ ಸರಕಾರಿ ಕಚೇರಿಗಳಿಗೆ ಹೋಗಬೇಕಾದರೂ ದಲ್ಲಾಳಿಗಳ ಮೂಲಕವೇ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ‌. ಉತ್ಸವಗಳನ್ನು ಮಾಡುವ ಮೂಲಕ ಜನರ ತೆರಿಗೆಯ […]

ಕೇಂದ್ರ ಬಜೆಟ್- ಆತ್ಮ ನಿರ್ಭರದಿಂದ ಅಮೃತ ಕಾಲದತ್ತ ಭಾರತ: ಉಡುಪಿ ಜಿಲ್ಲಾ ಬಿಜೆಪಿ

ಉಡುಪಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ರವರು ಮಂಡಿಸಿರುವ ಕೇಂದ್ರ ಬಜೆಟ್-2023 ಒಂದು ಅತ್ಯುತ್ತಮ ಬಜೆಟ್. ‘ನೀರಸ ಜಗತ್ತಿಗೆ ಭಾರತ ಒಂದೇ ಭರವಸೆ’ ಎಂಬ ಮಾತಿನಂತೆ ಈ ಬಜೆಟ್ ಉತ್ತರದಾಯಿಯಾಗಿ ಮೂಡಿ ಬಂದಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಆರ್ಥಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕ ದಿವಾಕರ ಶೆಟ್ಟಿ ಹೇಳಿದರು. ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ 2023ಬೇ ಸಾಲಿನ ಕೇಂದ್ರ ಬಜೆಟ್ ಕುರಿತು ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಫೆಡರಲ್ ಸಿಸ್ಟಮ್‌ನಲ್ಲಿರುವ ಭಾರತದಂತಹ ದೇಶದಲ್ಲಿ ಇಂತಹ […]

ಹಿಂಡನ್ ಬರ್ಗ್ ವರದಿಯ ಸಮಗ್ರ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್ ಧರಣಿ

ಉಡುಪಿ: ಸೋಮವಾರದಂದು ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಅದಾನಿ ವ್ಯವಹಾರದ ವಿರುದ್ಧ ಹಿಂಡನ್ ಬರ್ಗ್ ವರದಿಯ ಸಮಗ್ರ ತನಿಖೆಗೆ ಆಗ್ರಹಿಸಿ ಇಂದು ಉಡುಪಿ ಅಜ್ಜರಕಾಡುವಿನಲ್ಲಿರುವ ಎಲ್.ಐ.ಸಿ ಕಚೇರಿ ಎದುರು ಧರಣಿ ನಡೆಯಿತು. ಈ ವೇಳೆ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್ , ನಮ್ಮ ಹೋರಾಟ ಎಲ್‌ಐಸಿ ವಿರುದ್ಧ ಅಲ್ಲ. ಎಲ್.ಐ.ಸಿ ಗೆ ಆಗಿರುವ ಅನ್ಯಾಯಕ್ಕಾಗಿ ಸರಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. ಕೆಲವು ಮಂದಿ ಸೇರಿ ದೇಶದ ಬ್ಯಾಂಕ್ ಗಳನ್ನು ಲೂಟಿ ಮಾಡುತ್ತಿದ್ದಾರೆ. ದೇಶದ 12 ಕೋಟಿ […]

ಕಾಪು: ಬಿಜೆಪಿ ಯುವಮೋರ್ಚಾ ವತಿಯಿಂದ ಮರಳು ಶಿಲ್ಪ ರಚಿಸಿ ವಿಜಯ ಸಂಕಲ್ಪ ಅಭಿಯಾನ

ಕಾಪು: ಬಿಜೆಪಿ ಯುವಮೋರ್ಚಾ ವತಿಯಿಂದ ಸೋಮವಾರ ಕಾಪು ಬೀಚ್ ದೀಪಸ್ಥಂಭದ ಬಳಿ ಮರಳು ಶಿಲ್ಪ ರಚಿಸಿ ಸದಸ್ಯತ್ವ ಅಭಿಯಾನ ನಡೆಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಭಾಗವಹಿಸಿ ಶುಭಹಾರೈಸಿದರು. ಕಾಪು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸಚಿನ್ ಸುವರ್ಣ ನೇತೃತ್ತ್ವದಲ್ಲಿ ಈ ಕಾರ್ಯಕ್ರಮ‌ ನಡೆದಿದ್ದು, ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ ನಾಯಕ್, ಪ್ರಧಾನ‌ ಕಾರ್ಯದರ್ಶಿ ಅನಿಲ್ ಶೆಟ್ಟಿ, ರಾಜ್ಯ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಶ್ವೇತಾ, ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ, […]