ಪ್ರಚಾರಕ್ಕೆ ಕಿಚ್ಚು ಹಚ್ಚಿದ ಕಿಚ್ಚ ಸುದೀಪ್: ಮೊಳಕಾಲ್ಮೂರಿನಲ್ಲಿ ನಟನನ್ನು ನೋಡಲು ಮುಗಿ ಬಿದ್ದ ಜನ

ಮೊಳಕಾಲ್ಮೂರು: ಕನ್ನಡ ಚಿತ್ರನಟ ಕಿಚ್ಚ ಸುದೀಪ್ ಅವರು ಬುಧವಾರ ಚಿತ್ರದುರ್ಗದಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ತಿಪ್ಪೇಸ್ವಾಮಿ ಪರ ಪ್ರಚಾರ ನಡೆಸಿದರು. ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡ ವೀಡಿಯೊದಲ್ಲಿ, ಕಿಚ್ಚ ಸುದೀಪ್ ತಿಪ್ಪೇಸ್ವಾಮಿ ಮತ್ತು ಇತರ ಬಿಜೆಪಿ ನಾಯಕರೊಂದಿಗೆ ಟ್ರಕ್‌ನಲ್ಲಿ ನಿಂತು ಜನಸಮೂಹದತ್ತ ಕೈ ಬೀಸುತ್ತಿರುವುದು ಕಂಡುಬಂದಿದೆ. #WATCH | Kannada actor Kiccha Sudeep campaigns for Bharatiya Janata Party candidate from Molakalmuru Assembly constituency, S Thippeswamy, in […]
ಪ್ರಚಾರ ತೀವ್ರಗೊಳಿಸಿದ ಭಾರತೀಯ ಜನತಾ ಪಕ್ಷ: ಮೋದಿ-ಯೋಗಿ ಸಹಿತ ಘಟಾನುಘಟಿ ನಾಯಕರಿಂದ ಸಭೆ-ರೋಡ್ ಶೋ

ಬೆಂಗಳೂರು: ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರವನ್ನು ಭಾರತೀಯ ಜನತಾ ಪಕ್ಷವು ತೀವ್ರಗೊಳಿಸಿದ್ದು, ಮುಂದಿನ ಎರಡು ವಾರಗಳಲ್ಲಿ ಹಲವಾರು ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಂಗಳವಾರ ಮಂಡ್ಯ ಮತ್ತು ವಿಜಯಪುರದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಚುನಾವಣೆಯ ಸ್ಟಾರ್ ಪ್ರಚಾರಕರಾಗಿ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಯೋಗಿ ಆದಿತ್ಯನಾಥ್ ಪ್ರವೇಶ ಮಾಡಲಿದ್ದಾರೆ. ಒಕ್ಕಲಿಗರಲ್ಲಿ ಹಲವರು ತಮ್ಮದು ನಾಥ ಪಂಥಕ್ಕೆ ಸೇರಿದ ಮಠವೆಂದು ನಂಬುತ್ತಾರೆ. ಈ ಕಾರಣದಿಂದ ಒಕ್ಕಲಿಗರು ಯೋಗಿ […]
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಧಿಕೃತ ನಿವಾಸದ ‘ಸುಂದರೀಕರಣ’ಕ್ಕೆ 45 ಕೋಟಿ ಖರ್ಚು! ಕೊರೋನಾ ಸಂಕಷ್ಟ ಕಾಲದಲ್ಲಿ ದುಂದುವೆಚ್ಚ?

ಹೊಸದಿಲ್ಲಿ: ನಗರದ ಸಿವಿಲ್ ಲೈನ್ಸ್‌ನಲ್ಲಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸದ ‘ಸುಂದರೀಕರಣ’ಕ್ಕೆ 45 ಕೋಟಿ ರೂ ವೆಚ್ಚ ಮಾಡಲಾಗಿದೆ ಎಂದು ಬಿಜೆಪಿ ಮಂಗಳವಾರ ಹೇಳಿಕೊಂಡಿದ್ದು, ‘ನೈತಿಕ’ ನೆಲೆಯಲ್ಲಿ ರಾಜೀನಾಮೆ ನೀಡುವಂತೆ ಒತ್ತಾಯಿಸಿದೆ. ವರದಿಗಳ ಪ್ರಕಾರ ಅರವಿಂದ್ ಕೇಜ್ರಿವಾಲ್ ಅವರ ವಸತಿ ಗೃಹದ ನವೀಕರಣಕ್ಕೆ ರೂ 44.78 ಕೋಟಿ ಖರ್ಚು ಮಾಡಲಾಗಿದೆ. ಕೊರೋನಾ ಸಂಕಷ್ಟ ಕಾಲದಲ್ಲಿ ಆಮ್ಲಜನಕ ಟ್ಯಾಂಕರ್‌ಗಳನ್ನು ಖರೀದಿಸಲು ಹಣವಿಲ್ಲ ಎಂದಿದ್ದ ದೆಹಲಿ ಎಎಪಿ ಸರ್ಕಾರವು ತಲಾ 5 ಲಕ್ಷ ರೂಪಾಯಿ ಮೌಲ್ಯದ […]
ಉಡುಪಿ: ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಜೊತೆ ಭಾಗಿಯಾದ ಕೇಂದ್ರ ಸಚಿವ-ಸಂಸದರು

ಉಡುಪಿ: ಇಲ್ಲಿನ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಪರವಾಗಿ ಉಡುಪಿ ಸಂತೆಕಟ್ಟೆಯಲ್ಲಿ ಆಯೋಜಿಸಿದ್ದ ಪಾದಯಾತ್ರೆಯಲ್ಲಿ ಕೇಂದ್ರ ಸಚಿವ ಬಿ ಎಲ್ ವರ್ಮಾ, ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಶೆಟ್ಟಿ, ಕೆ ರಘುಪತಿ ಭಟ್, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ಶ್ರೀಮತಿ ವೀಣಾ ನಾಯ್ಕ್, ನಿಕಟ ಪೂರ್ವ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿ ಮತಯಾಚನೆ ಮಾಡಿದರು.
ಶಿವಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆ

ಕಾರ್ಕಳ: ಕಾಂಗ್ರೆಸ್ ಅಭ್ಯರ್ಥಿ ಉದಯ ಕುಮಾರ್ ಶೆಟ್ಟಿಯವರ ನಾಯಕತ್ವವನ್ನು ಮೆಚ್ಚಿ ಕಾಂಗ್ರೆಸ್ ಪಕ್ಷದ ಚುನಾವಣಾ ಕಚೇರಿಯಲ್ಲಿ ಶಿವಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರವೀಣ್ ಸೂಡ ಕೆರೆಬೆಟ್ಟು ಬಿಜೆಪಿ ರೈತ ಮೋರ್ಚಾದ ಕಾರ್ಯದರ್ಶಿ, ಅರುಣ್ ಕುಮಾರ್ ಶೆಟ್ಟಿ, ಹರೀಶ್ ಕುಮಾರ್ ಹಾಗೂ ಶ್ರೀನೀವಾಸ್ ಪೂಜಾರಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಕಾರ್ಕಳ ಬ್ಲಾಕ್ ಅಧ್ಯಕ್ಷ ಸದಾಶಿವ ದೇವಾಡಿಗ, ಸುಬೀತ್ ಎನ್.ಆರ್, ಜಿಲ್ಲಾ ಯುವ ಕಾಂಗ್ರೆಸ್ ನ ಅಧ್ಯಕ್ಷ ದೀಪಕ್ ಕೋಟ್ಯಾನ್ ಉಪಸ್ಥಿತಿತರಿದ್ದರು.