ಕಾಪು: ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ನೀಡಿದ ಚಿತ್ರನಟಿ ತಾರ

ಕಾಪು: ಇಲ್ಲಿನ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಾಲಯಕ್ಕೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಪಕ್ಷದ ಸ್ಟಾರ್ ಪ್ರಚಾರಕಿ ತಾರ ಭೇಟಿ ನೀಡಿದರು. ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ, ಪಕ್ಷದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬಿಜೆಪಿ-ಕಾಂಗ್ರೆಸ್ ಚುನಾವಣಾ ಕದನ ತಾರಕಕ್ಕೆ: ಬಜರಂಗ ದಳ ನಿಷೇಧ ಪ್ರಸ್ತಾಪಕ್ಕೆ ಎಲ್ಲೆಡೆ ಆಕ್ರೋಶ; ಸಾಮಾಜಿಕ ಜಾಲತಾಣದಲ್ಲಿ ಭಜರಂಗಿ ಕ್ಯಾಂಪೇನ್ ವೈರಲ್!

ಬೆಂಗಳೂರು: ಬಿಜೆಪಿ-ಕಾಂಗ್ರೆಸ್ ಮಧ್ಯೆ ಚುನಾವಣಾ ಕದನ ತಾರಕ್ಕೇರಿದ್ದು, ಮಂಗಳವಾರದಂದು ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ತನ್ನ ಪ್ರಣಾಳಿಕೆಯಲ್ಲಿ ಪಿ.ಎಫ್.ಐ ಮತ್ತು ಬಜರಂಗದಳವನ್ನು ಸಮೀಕರಿಸಿದ್ದ ಕಾಂಗ್ರೆಸ್ ಈ ಸಂಘಟನೆಗಳಿಗೆ ನಿಷೇಧ ಹೇರುವ ಬಗ್ಗೆ ಘೋಷಣೆ ಮಾಡಿತ್ತು. ಇದರಿಂದ ಆಕ್ರೋಶಗೊಂಡ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದಂತಹ ಹಿಂದೂ ಪರ ಸಂಘಟನೆಗಳು ಕಾಂಗ್ರೆಸ್ ವಿರುದ್ದ ಕಿಡಿಕಾರಿವೆ. ಕಾಂಗ್ರೆಸ್‌ ನ ಬಜರಂಗದಳ ನಿಷೇಧ ಭರವಸೆಗೆ ಇತ್ತ ಬಿಜೆಪಿ ನಾಯಕರು ಕೂಡಾ ಸಿಡಿದೆದ್ದಿದ್ದಾರೆ. ತಮ್ಮ ಪ್ರೊಫೈಲ್ ಫೋಟೋ, ವಾಟ್ಸಪ್, ಫೇಸ್‌ಬುಕ್ ಸ್ಟೇಟಸ್‌ಗಳಲ್ಲಿ […]

ಮೇ-3 ಮಂಗಳೂರಿಗೆ ಪ್ರಧಾನಿ ಮೋದಿ: ವಾಹನ ಸಂಚಾರದಲ್ಲಿ ಬದಲಾವಣೆ

ಮಂಗಳೂರು: ಮೇ 3ರಂದು ಮುಲ್ಕಿಯ ಕೊಲ್ನಾಡು ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನವ ಕರ್ನಾಟಕ ಸಂಕಲ್ಪ ಸಮಾವೇಶ ಹಿನ್ನೆಲೆಯಲ್ಲಿ ಸಮಾವೇಶ ನಡೆಯುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಚಾರ ಬದಲಾವಣೆ ಮಾಡಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಭದ್ರತೆಯ ಹಿತದೃಷ್ಟಿಯಿಂದ ಮೇ 3 ರ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಸಂಚಾರದಲ್ಲಿ ಮಾರ್ಪಾಡು ಮಾಡಲಾಗಿದೆ.   ಬೆಳಗ್ಗೆ ಸುಮಾರು 10.30ರ ಬಳಿಕ ಪ್ರಧಾನಿ ಮೋದಿ ಕೊಲ್ನಾಡು ಹೆಲಿಪ್ಯಾಡ್‌ನಿಂದ ಕಾರ್ಯಕ್ರದ ಸ್ಥಳಕ್ಕೆ […]

ಮಂಗಳೂರು: ಇಂದು ಅಮಿತ್ ಶಾ ಭೇಟಿ; ಉಡುಪಿ- ಮಂಗಳೂರು ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

ಮಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಅವಿಭಜಿತ ಜಿಲ್ಲೆಗೆ ಭೇಟಿ ನೀಡಲಿದ್ದು ಬಿಜೆಪಿ ಚುನಾವಣಾ ಪ್ರಚಾರದ ಅಂಗವಾಗಿ ಟೌನ್ ಹಾಲ್ ನಿಂದ ನವಭಾರತ ವೃತ್ತದವರೆಗೆ ರೋಡ್ ಶೋ ಆಯೋಜಿಸಿರುವ ಹಿನ್ನೆಲೆಯಲ್ಲಿ ನಗರ ಪೊಲೀಸರು ಶನಿವಾರದಂದು ಮಧ್ಯಾಹ್ನ 3 ರಿಂದ 7 ರವರೆಗೆ ಪ್ರಮುಖ ಜಂಕ್ಷನ್‌ಗಳಲ್ಲಿ ಸಂಚಾರ ವ್ಯತ್ಯಯವನ್ನು ಘೋಷಿಸಿದ್ದಾರೆ. ಶನಿವಾರದಂದು ನಗರ ಪೊಲೀಸರು ಜಾರಿಗೊಳಿಸಿದ ಸಂಚಾರ ಬದಲಾವಣೆಗಳು ಈ ಕೆಳಗಿನಂತಿವೆ: ಉಡುಪಿ-ಮಂಗಳೂರು ಮಾರ್ಗವಾಗಿ ಸಂಚರಿಸುವ ಎಲ್ಲಾ ಬಸ್‌ಗಳು ಕೊಟ್ಟಾರ ಚೌಕಿ – ಕೆಪಿಟಿ – […]

ಡಾ.ವಿ.ಎಸ್.ಆಚಾರ್ಯ ಕನಸು ನನಸಾಗಿಸಲು ಯಶ್ ಪಾಲ್ ಸುವರ್ಣರಿಗೆ ಮತ ನೀಡಿ: ಪ್ರತಾಪ್ ಸಿಂಹ ನಾಯಕ್

ಉಡುಪಿ: ಡಾ.ವಿ.ಎಸ್ ಆಚಾರ್ಯ ಕಂಡ ನವ ಉಡುಪಿ ನಿರ್ಮಾಣದ ಕನಸು ನನಸಾಗಿಸಲು ಬಿಜೆಪಿಯ ಸಮರ್ಥ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಅವರನ್ನು ಗೆಲ್ಲಿಸುವಂತೆ ಮತದಾರರಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮನವಿ ಮಾಡಿದರು. 3 ಬಾರಿ ಉಡುಪಿ ನಗರ ಸಭೆಯ ಸದಸ್ಯರಾಗಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಮತ್ತು ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾಗಿ ಸಹಕಾರ ಕ್ಷೇತ್ರದಲ್ಲೂ ತಮ್ಮ ಕಾರ್ಯವೈಖರಿಯಿಂದ ಗುರುತಿಸಿಕೊಂಡು, ಧಾರ್ಮಿಕ ಸಾಮಾಜಿಕ ಶಿಕ್ಷಣ ಕ್ಷೇತ್ರದಲ್ಲಿ […]