ಬೆಳ್ತಂಗಡಿಯನ್ನು ದೇಶದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸುವ ಪಣ: ಹರೀಶ್ ಪೂಂಜಾ

ಬೆಳ್ತಂಗಡಿ: ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಅವರು ನಡ, ಮಡಂತ್ಯಾ ರು ಮತ್ತು ಕಲ್ಲೇರಿಯಲ್ಲಿ ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗಿಯಾದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಹರೀಶ್ ಪೂಂಜಾ, ಕ್ಷೇತ್ರದ ಮತದಾರರು ಮೊದಲ ಬಾರಿಗೆ ಗೆಲ್ಲಿಸಿದಾಗ ರಸ್ತೆ, ಕಿಂಡಿ ಅಣೆಕಟ್ಟು, ಶಾಲಾ- ಕಾಲೇಜುಗಳ ಅಭಿವೃದ್ದಿ, ಗ್ರಂಥಾಲಯ ಹಾಗೂ ಧಾರ್ಮಿಕ ಕೇಂದ್ರಗಳ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಈ ಬಾರಿಯೂ ಗೆಲ್ಲಿಸಿದಲ್ಲಿ ಬೆಳ್ತಂಗಡಿಯನ್ನು ದೇಶದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸುತ್ತೇನೆ ಎಂದು ಅವರು ಹೇಳಿದರು. ಸಭೆಯಲ್ಲಿ ಮಂಡಲ ಬಿಜೆಪಿ […]

ಪಕ್ಷ ಪ್ರಚಾರಕ್ಕೆ ಕರುನಾಡ ಸಿಂಘಂ ಖ್ಯಾತಿಯ ಅಣ್ಣಾಮಲೈ ಸಾಥ್: ಇಂದು ಕೇಸರಿ ಕಲರವ ಬೃಹತ್ ರೋಡ್ ಶೋ

ಉಡುಪಿ: ಇಂದು ಮಧ್ಯಾಹ್ನ 3 ಗಂಟೆಗೆ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಮತ್ತು ಕರ್ನಾಟಕದ ಸಿಂಘಂ ಖ್ಯಾತಿಯ ಅಣ್ಣಾಮಲೈ ನೇತೃತ್ವದಲ್ಲಿ ಬೃಹತ್ ರೋಡ್ ಶೋ ಏಳೂರು ಮೊಗವೀರ ಭವನದಿಂದ ಹೊರಟು ವಡಭಾಂಡೇಶ್ವರ ಬಲರಾಮ ದೇವಸ್ಥಾನವನ್ನು ತಲುಪಲಿದೆ. ಆ ಬಳಿಕ ನಡೆಯುವ ಬೃಹತ್ ಸಮಾವೇಶದಲ್ಲಿ ಕೆ. ಅಣ್ಣಾಮಲೈ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮಣಿಪಾಲ ಹುಡ್ಕೋ ಕಾಲನಿಗೆ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ

ಮಣಿಪಾಲ: ಮಣಿಪಾಲ ವಾರ್ಡಿನ ಎಲ್.ಐ.ಜಿ ಕಾಲೋನಿ ಹಾಗೂ ಹೂಡ್ಕೊ ಕಾಲನಿಗೆ ಭೇಟಿ ನೀಡಿದ ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಪಕ್ಷದ ಪರವಾಗಿ ಮತ ಯಾಚಿಸಿದರು.

ಉಡುಪಿ: ಮೀನುಗಾರರ ಸರ್ವೋದಯಕ್ಕಾಗಿ ವಿಶೇಷ ಆದ್ಯತೆ; ಬಿಜೆಪಿ ಪಕ್ಷ ಪ್ರಣಾಳಿಕೆಯಲ್ಲಿ ಘೋಷಣೆ

ಉಡುಪಿ: ಬಿಜೆಪಿ ಉಡುಪಿ ಜಿಲ್ಲಾ ಮಾಧ್ಯಮ ಕೇಂದ್ರದಲ್ಲಿ ಬುಧವಾರದಂದು ಉಡುಪಿ ವಿಧಾನಸಭಾ ಕ್ಷೇತ್ರದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಾಯಿತು. ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಉಡುಪಿಯನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಸಂಕಲ್ಪದೊಂದಿಗೆ ಈ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದೇವೆ. ನಗರದಲ್ಲಿ ಬಹುಮುಖ್ಯವಾಗಿ ಬೇಕಾಗಿರುವ ಬಹುಮಡಿ ಪಾರ್ಕಿಂಗ್ ಸಂಕೀರ್ಣ ನಿರ್ಮಾಣ, ಕಲ್ಸಂಕ ಜಂಕ್ಷನ್ ನಲ್ಲಿ 70 ಮೀಟರ್ ವ್ಯಾಸವುಳ್ಳ ಸಿಗ್ನಲ್ ರಹಿತ ಮಧ್ವಾಚಾರ್ಯ ವೃತ್ತ ನಿರ್ಮಾಣ, ಒಳಚರಂಡಿ ವ್ಯವಸ್ಥೆಯ ಪುನನಿರ್ಮಾಣ, 35 ವಾರ್ಡ್ ನಲ್ಲಿ ವೈಜ್ಞಾನಿಕ […]

ಮಣಿಪಾಲ: ಮಾಹೆ ಪರಿಸರಕ್ಕೆ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ

ಮಣಿಪಾಲ: ಉಡುಪಿ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಮಂಗಳವಾರದಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಎಂಐಟಿ ಮಣಿಪಾಲ, ಪಾಲಿಟೆಕ್ನಿಕ್ ಕಾಲೇಜು, ಮಣಿಪಾಲ್ ಪ್ರೆಸ್ ಮತ್ತು ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಭೇಟಿ ನೀಡಿ ಮತಯಾಚಿಸಿದರು. ರಘುಪತಿ ಭಟ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.