ಉಡುಪಿ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಭರ್ಜರಿ ರೋಡ್ ಶೋ: ಅಭಿವೃದ್ದಿ ಆಡಳಿತವೇ ಶ್ರೀ ರಕ್ಷೆ ಎಂದ ನಾಯಕರು

ಉಡುಪಿ : ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಅವರ ಪರವಾಗಿ ಬಿಜೆಪಿ ನಾಯಕರು ಮಲ್ಪೆಯ ಏಳೂರು ಮೊಗವೀರ ಸಭಾಭವನದ ಬಳಿಯಿಂದ ವಂಡಭಾಂಡೇಶ್ವರದ ಬಲರಾಮ ದೇವಸ್ಥಾನದ ವರೆಗೆ ಪಾದಯಾತ್ರೆಯ ಮೂಲಕ ಭರ್ಜರಿ ರೋಡ್ ಶೋ ನಡೆಸಿ ಮತಯಾಚಿಸಿದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಮಾತನಾಡಿ, ಮಂಗಳೂರಿನಲ್ಲಿ ತನ್ನ ಕುಟುಂಬದೊಂದಿಗೆ ವಾಸ ಮಾಡಿಕೊಂಡಿದ್ದು ಚುನಾವಣೆ ಸಂದರ್ಭದಲ್ಲಿ ಸೀಟನ್ನು ಪಡೆದುಕೊಂಡು ಬಂದು ನಿಮ್ಮ ಸೇವೆ ಮಾಡುವುದಾಗಿ ಹೇಳುವ ಇತರ ಪಕ್ಷದ ಅಭ್ಯರ್ಥಿಗಳಂತೆ ನಾನಲ್ಲ. ನನ್ನ […]

ಬೆಳ್ತಂಗಡಿ: ಮಿತ್ತಬಾಗಿಲು, ಮಲವಂತಿಗೆ ಮತ್ತು ಕಡಿರುದ್ಯಾವರ ಭಾಗದ ಕಾಂಗ್ರೆಸ್‌ ನಾಯಕರು ಬಿಜೆಪಿ ಸೇರ್ಪಡೆ

ಬೆಳ್ತಂಗಡಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾಗೂ ಮಂಡಲ ಅಧ್ಯಕ್ಷ ಜಯಂತ್‌ ಕೋಟ್ಯಾನ್‌ ಅವರ ಸಮ್ಮುಖದಲ್ಲಿ ಮೇ.5 ರಂದು ಮಿತ್ತಬಾಗಿಲು, ಮಲವಂತಿಗೆ ಮತ್ತು ಕಡಿರುದ್ಯಾವರ ಭಾಗದ ಕಾಂಗ್ರೆಸ್‌ ನಾಯಕರು ಬಿಜೆಪಿಗೆ ಸೇರ್ಪಡೆಗೊಂಡರು. ಕಾಂಗ್ರೆಸ್‌ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಸೆಬಾಸ್ಟಿನ್ ಮಿತ್ತಬಾಗಿಲು, ಬಾಲಕೃಷ್ಣ ಗೌಡ ಮಲವಂತಿಗೆ, ಪೂವಪ್ಪ ಪೂಜಾರಿ ಮಲವಂತಿಗೆ, ವನಿತಾ ಕಡಿರುದ್ಯಾವರ, ಬಾಲಕೃಷ್ಣ ಗೌಡ ಉದ್ದಾರೆ ಅವರನ್ನು ಪಕ್ಷದ ಧ್ವಜ ನೀಡುವ ಮೂಲಕ ಶಾಸಕ ಹರೀಶ್ ಪೂಂಜ ಅವರು ಬಿಜೆಪಿಗೆ ಬರಮಾಡಿಕೊಂಡರು.

ಕಾಂಚನ್ ಉಪನಾಮಕ್ಕೆ ಮಾಡಿದ ಅವಮಾನ ಮೊಗವೀರ ಸಮುದಾಯಕ್ಕೆ ಅವಮಾನ ಮಾಡಿದಂತೆ: ರಮೇಶ್ ಕಾಂಚನ್

ಉಡುಪಿ: ಕಾಂಚನ್ ಎನ್ನುವುದು ಕರಾವಳಿ ತಡಿಯ ಉಡುಪಿಯ ಶ್ರಮ ಜೀವಿಗಳಾದ ಮೊಗವೀರ ಸಮುದಾಯದ ಹೆಮ್ಮೆಯ ಕುಲನಾಮ. ಇಲ್ಲಿ ಕಾಂಚನ್ ಮೂಲ ಸ್ಥಾನ ಕೂಡ ‌ಹೊಂದಿದೆ. ಆದರೆ ನಮ್ಮ ಕುಲನಾಮವನ್ನು ಉಡುಪಿ ಬಿಜೆಪಿಯ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ವಿಕಾರವಾಗಿ ತಿರುಚಿ ಇಡೀ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಸಮಾಜ ಬಾಂಧವರು ವಿಚಲಿತರಾಗದೇ ಶಾಂತಿಯುತವಾಗಿ ಇರಬೇಕೆಂದು ಇಡೀ ಸಮಾಜದ ಪರವಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ವಿನಂತಿಸಿಕೊಂಡಿದ್ದಾರೆ. ಕೈಲಾಗದವರ‌ ಕೊನೆಯ‌ ಅಸ್ತ್ರ ಅಪಪ್ರಚಾರ. ಗೆಲ್ಲುವ ಅಮಲಿನಲ್ಲಿದ್ದ ಬಿಜೆಪಿ ನಾಯಕರು ಪ್ರಸಾದ್ […]

ಇಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರ್ಮಾ ಅವರಿಂದ ಹರೀಶ್ ಪೂಂಜಾ ಪರ ಪ್ರಚಾರ

ಬೆಳ್ತಂಗಡಿ: ಚುನಾವಣಾ ಕಣ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಎಲ್ಲಾ ಪಕ್ಷಗಳ ಘಟಾನುಘಟಿ ನಾಯಕರು ಕರ್ನಾಟಕದಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಹಿಂದುತ್ವದ ಭದ್ರಕೋಟೆ ಎನಿಸಿಕೊಂಡಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಹಿಂದುತ್ವದ ಬೆಂಕಿ ಚೆಂಡು ಖ್ಯಾತಿಯ ಯೋಗಿ ಆದಿತ್ಯನಾಥ್ ಮತ್ತು ಹಿಮಂತ ಬಿಸ್ವ ಸರ್ಮಾ ಬೃಹತ್ ರೋಡ್ ಶೋ ಗಳಲ್ಲಿ ಭಾಗವಹಿಸಲಿದ್ದಾರೆ.   ಇಂದು ಸಂಜೆ ಬೆಳ್ತಂಗಡಿಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರ್ಮಾ ಅವರ ರೋಡ್ ಶೋ ನಡೆಯಲಿದೆ. ಸಂಜೆ 4 ಗಂಟೆಗೆ ಉಜಿರೆ ಕಾಲೇಜು […]

ಬಜರಂಗದಳವನ್ನು ನಿಷೇಧಿಸುವ ಪ್ರಸ್ತಾವ ಕಾಂಗ್ರೆಸ್ ಮುಂದಿಲ್ಲ: ಪ್ರಸಾದ್ ರಾಜ್ ಕಾಂಚನ್

ಉಡುಪಿ: ಹನುಮಂತ ದೇವರು ಯಾವ ಸಂಘಟನೆಯ ವೈಯುಕ್ತಿಕ ಸೊತ್ತಲ್ಲಾ, ಬಜರಂಗದಳವನ್ನು ಸಮೀಕರಿಸುವ ಮೂಲಕ ಪಕ್ಷವೊಂದು ಭಕ್ತರ ಭಾವನೆಗೆ ಧಕ್ಕೆ ತರುವುದು ಸರಿಯಾದ ನಡೆಯಲ್ಲ. ಹನುಮಂತ ದೇಶ ವಿದೇಶ ಸೇರಿದಂತೆ ಪ್ರತಿ ಭಾರತೀಯನ ಹೃದಯದಲ್ಲಿ ಪೂಜನೀಯ ದೇವರು ಎಂದು ಉಡುಪಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಹೇಳಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಜರಂಗದಳವನ್ನು ನಿಷೇಧಿಸುವ ಪ್ರಸ್ತಾವ ಕಾಂಗ್ರೆಸ್ ಮುಂದಿಲ್ಲ. ಬಿಜೆಪಿ ಓಟಿಗಾಗಿ ವಾಸ್ತವ ವಿಷಯವನ್ನು ತಿರುಚಿ ಸುಳ್ಳು ಸುದ್ದಿ ಹರಡುತ್ತಿದೆ. ಪ್ರಜ್ಞಾವಂತ […]