ಕರ್ನಾಟಕ ವಿಧಾನಸಭಾ ಚುನಾವಣೆ: 72.67% ಮತದಾನ; ಅತಂತ್ರ ಸರಕಾರದ ಮುನ್ಸೂಚನೆ ನೀಡಿದ ಎಕ್ಸಿಟ್ ಪೋಲ್ ಗಳು

ಬೆಂಗಳೂರು: ಬುಧವಾರ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸರಿಸುಮಾರು 72.67% ಮತದಾನವಾಗಿದೆ. 2018 ರ ಚುನಾವಣೆಯಲ್ಲಿ 72.44% ಮತ್ತು 2013 ರಲ್ಲಿ 71.83% ಮತದಾನವಾಗಿತ್ತು. ದ.ಕ ಜಿಲ್ಲೆಯಲ್ಲಿ 76.15% ಮತದಾನವಾಗಿದ್ದರೆ, ಉಡುಪಿಯಲ್ಲಿ 78.46% ಮತದಾನವಾಗಿದೆ. ಚಿಕ್ಕಬಳ್ಳಾಪುರದಲ್ಲಿ ಸರ್ವಾಧಿಕ 85.83% ಮತದಾನವಾಗಿದ್ದರೆ, ಬಿ.ಬಿ.ಎಂ.ಪಿ(ದಕ್ಷಿಣ) ದಲ್ಲಿ 52.80% ಮತದಾನ ನಡೆದಿದೆ. ಮೂರು ಪ್ರಮುಖ ಎಕ್ಸಿಟ್ ಪೋಲ್ ಏಜೆನ್ಸಿಗಳು ಸೂಚಿಸಿದಂತೆ ಕರ್ನಾಟಕವು ಅತಂತ್ರ ಫಲಿತಾಂಶವನ್ನು ಸೂಚಿಸುತ್ತಿದೆ. ಬಹುತೇಕ ಎಕ್ಸಿಟ್ ಪೋಲ್ ಗಳು ಕಾಂಗ್ರೆಸ್ ಗೆ ಬಹುಮತವನ್ನು ಸೂಚಿಸುತ್ತಿದ್ದರೆ ಮತ್ತೆ ಕೆಲವು ಪೋಲ್ […]

ಉಡುಪಿ: ಯಶ್ ಪಾಲ್ ಸುವರ್ಣ ಅವರಿಂದ ಮತ ಚಲಾವಣೆ

ಉಡುಪಿ: ಇಲ್ಲಿನ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಅವರು ತಮ್ಮ ಮತ ಕ್ಷೇತ್ರವಾದ ಉಡುಪಿ ನಗರದ ಅಜ್ಜರಕಾಡು ವಾರ್ಡಿನಲ್ಲಿರುವ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನ ಬೂತ್ ನಂ 188 ರಲ್ಲಿ ಮತದಾನ ಮಾಡಿದರು.

ಕೃಷ್ಣ ಮಠಕ್ಕೆ ಭೇಟಿ ನೀಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ

ಉಡುಪಿ: ಮಹಾರಾಷ್ಟ್ರಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಶ್ರೀಕೃಷ್ಣಮಠಕ್ಕೆ ಆಗಮಿಸಿ ಕೃಷ್ಣದೇವರ ದರ್ಶನ ಪಡೆದು ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು. ಪರ್ಯಾಯ ಮಠದ ದಿವಾನರಾದ ವರದರಾಜ ಭಟ್, ಬಿ.ಜೆ.ಪಿ.ಯ ಉದಯಕುಮಾರ್ ಶೆಟ್ಟಿ, ಸ್ವಾಗತ ಸಮಿತಿ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್, ವಾಸುದೇವ ಪೆರಂಪಳ್ಳಿ, ಮೊದಲಾದವರು ಉಪಸ್ಥಿತರಿದ್ದರು.

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿಕೆ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ನೀಡಿದ ಭಾರತೀಯ ಜನತಾ ಪಕ್ಷ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಭಾರೀ ರಾಜಕೀಯ ಬಿರುಗಾಳಿ ಎಬ್ಬಿಸಿರುವ ‘ಕರ್ನಾಟಕದ ಸಾರ್ವಭೌಮತ್ವ’ ಕುರಿತು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ನೀಡಿದ ಹೇಳಿಕೆ ವಿರುದ್ಧ ಭಾರತೀಯ ಜನತಾ ಪಕ್ಷ ಸೋಮವಾರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ಶನಿವಾರದಂದು ಸೋನಿಯಾ ಗಾಂಧಿ ಅವರು ಕರ್ನಾಟಕದ ಹುಬ್ಬಳ್ಳಿ ಜಿಲ್ಲೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಕಾಂಗ್ರೆಸ್ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಪೋಸ್ಟ್ ಈ ಬಗ್ಗೆ ಪೋಸ್ಟ್ ಮಾಡಿ, “ಸಿಪಿಪಿ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಜಿ 6.5 ಕೋಟಿ ಕನ್ನಡಿಗರಿಗೆ […]

ಉಡುಪಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಂದ ರೋಡ್ ಶೋ

ಉಡುಪಿ: ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಶಿವಸೇನೆ ನಾಯಕ ಏಕನಾಥ್ ಶಿಂಧೆ ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆ. ಶಿಂಧೆ ಅವರು ಸೋಮವಾರ ರಾಜ್ಯಕ್ಕೆ ಆಗಮಿಸಲಿದ್ದು, ಕಾಪು ಮತ್ತು ಉಡುಪಿ ಪಟ್ಟಣದ ಬಿಜೆಪಿಯ ರೋಡ್ ಶೋಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಉಡುಪಿ ತಲುಪುವ ಮುನ್ನ ಶಿಂಧೆ ಅವರು ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ನಂತರ ಧರ್ಮಸ್ಥಳ ದೇವಸ್ಥಾನದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಲಿದ್ದಾರೆ. ಬಳಿಕ ಉಡುಪಿಯ ಶ್ರೀಕೃಷ್ಣ ಮಠಕ್ಕೂ ಭೇಟಿ ನೀಡಲಿದ್ದು, ಸೋಮವಾರವೇ […]