ಮೂಡಬಿದಿರೆ: ಬೆನ್ನುಮೂಳೆ ಮುರಿತಕ್ಕೊಳಗಾದವರಿಗೆ 3 ದಿನಗಳ ಉಚಿತ ವೈದ್ಯಕೀಯ ಶಿಬಿರಕ್ಕೆ ಚಾಲನೆ
ಮೂಡಬಿದ್ರೆ, ಜೂ. 28: ಬೆನ್ನುಮೂಳೆ ಮುರಿತಕ್ಕೊಳಗಾದವರಿಗೆ ಚಿಕಿತ್ಸೆ, ಸಲಹೆ ನೀಡುವ ಮೂರು ದಿನಗಳ ವೈದ್ಯಕೀಯ ತಪಾಸಣಾ ಶಿಬಿರಕ್ಕೆ ಮೂಡಬಿದ್ರೆಯ ಆಳ್ವಾಸ್ ಹೆಲ್ತ್ ಸೆಂಟರ್ ನಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು. ಆಳ್ವಾಸ್ ಹೆಲ್ತ್ ಸೆಂಟರ್ ನ ವ್ಯವಸ್ಥಾಪಕ ನಿರ್ದೇಶಕ ಡಾ. ವಿನಯ್ ಆಳ್ವ ಉದ್ಘಾಟಿಸಿ ಮಾತನಾಡಿ, ದಿವ್ಯಾಂಗರ ಬದುಕಿಗೆ ಈ ಶಿಬಿರವು ಆಶಾಕಿರಣವಾಗಲಿ ಎಂದು ಶುಭ ಹಾರೈಸಿ, ಇಂತಹ ಶಿಬಿರಕ್ಕೆ ಮುಂದೆಯೂ ಸಹಕಾರ ನೀಡುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಸೇವಾಭಾರತಿಯ ಅಧ್ಯಕ್ಷರಾದ ಕೆ. ವಿನಾಯಕ ರಾವ್ ಅವರು ಅಧ್ಯಕ್ಷತೆಯ […]