ಬೆಂಗಳೂರು: ದರೋಡೆಕೋರರನ್ನು ಬರೀ 15 ನಿಮಿಷದಲ್ಲೇ ಹಿಡಿದ ಪೊಲೀಸರು!

ಬೆಂಗಳೂರು: ದಂಪತಿ ಮತ್ತು ಅಡಿಕೆ ವ್ಯಾಪಾರಿಯನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಿ 1.10 ಕೋಟಿ ರೂ. ನಗದು ದೋಚಿದ್ದ ದರೋಡೆಕೋರರನ್ನು ಘಟನೆ ನಡೆದ ಕೆಲವೇ ಸಮಯದಲ್ಲಿ ಬಂಧಿಸುವಲ್ಲಿ ಹುಳಿಮಾವು ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ನರಸಿಂಹ(30), ಜೀವನ್(28), ಕುಮಾರ್(33), ವೆಂಕಟರಾಜು(32), ಕಿಶೋರ್(32), ನಮನ್(19), ರವಿಕಿರಣ್(30), ಚಂದ್ರು(34) ಬಂಧಿತರು. ಆರೋಪಿಗಳು ಜಿಗಣಿ, ಬೇಗೂರು ಮತ್ತು ಚಂದಾಪುರ ನಿವಾಸಿಗಳಾಗಿದ್ದಾರೆ. ಬಹುತೇಕರು ಸೆಕ್ಯೂರಿಟಿ ಗಾರ್ಡ್ ಕೆಲಸದ ಜತೆಗೆ ಸ್ವಿಗ್ಗಿ ಡೆಲಿವರಿ ಬಾಯ್‌ಗಳಾಗಿ ಹಾಗೂ ಇತರೆ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದಾರೆ. ಈ ಪೈಕಿ ಆರೋಪಿಗಳಾದ ವೆಂಕಟರಾಜು […]