ಶಾಸಕ ಹರೀಶ್ ಪೂಂಜಾ ಮೇಲೆ ದಾಳಿ ಯತ್ನ: ಬಿಜೆಪಿ ಯುವ ಮೋರ್ಚಾ, ಹಿಂದೂ ಸಂಘಟನೆಗಳಿಂದ ಖಂಡನೆ

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾ ಅವರ ಮೇಲೆ ದುಷ್ಕರ್ಮಿಗಳ ತಂಡವೊಂದು ದಾಳಿಗೆ ಯತ್ನ ನಡೆಸಿದ ಘಟನೆ ಶುಕ್ರವಾರ ಅ.13ರಂದು ರಾತ್ರಿ 11.15 ರ ಸುಮಾರಿಗೆ ನಡೆದಿದೆ. ಹರೀಶ್ ಪೂಂಜಾ ಅವರು ಮಂಗಳೂರು ವಿಮಾನ ನಿಲ್ದಾಣದಿಂದ ಬೆಳ್ತಂಗಡಿಗೆ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ಫರಂಗಿಪೇಟೆ ಬಳಿ ಸ್ಕಾರ್ಪಿಯೋ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಶಾಸಕರಿದ್ದ ಕಾರನ್ನು ಅಡ್ಡಗಟ್ಟಿ ದಾಳಿಗೆ ಯತ್ನಿಸಿದೆ. ಆದರೆ ಅದೃಷ್ಟವಶಾತ್ ಶಾಸಕರು ಈ ಕಾರಿನಲ್ಲಿರದೆ, ತಮ್ಮ ಸಂಬಂಧಿಯೊಬ್ಬರ ಕಾರಿನಲ್ಲಿ ಮುಂದಿನಿಂದ ಪ್ರಯಾಣಿಸುತ್ತಿದ್ದರು. ಶಾಸಕರ ಕಾರು ಹಿಂದಿನಿಂದ ಪ್ರಯಾಣಿಸುತ್ತಿತ್ತು. ಈ ಬಗ್ಗೆ […]

ಬೆಳ್ತಂಗಡಿ: ಸಾಯಿರಾಂ ಗ್ರೂಪ್ ವತಿಯಿಂದ ಆಂಬ್ಯುಲೆನ್ಸ್ ಸೇವೆ ಲೋಕಾರ್ಪಣೆ

ಬೆಳ್ತಂಗಡಿ: ತುರ್ತು ಸಂದರ್ಭಗಳಲ್ಲಿ, 24×7 ಸೇವೆಯನ್ನು ನೀಡಲು ಬೆಳ್ತಂಗಡಿ ಸಾಯಿರಾಂ ಗ್ರೂಪ್ ವತಿಯಿಂದ ಆಂಬ್ಯುಲೆನ್ಸ್ ಸೇವೆಯನ್ನು ಲೋಕಾರ್ಪಣೆಗೊಳಿಸಲಾಯಿತು. ಬುಧವಾರ ಕುತ್ಯಾರು ಸೋಮನಾಥೇಶ್ವರ ದೇವರ ಆಶೀರ್ವಾದದೊಂದಿಗೆ ಆಂಬ್ಯುಲೆನ್ಸ್ ಸೇವೆಯು ಪ್ರಾರಂಭಗೊಂಡಿತು. ಈ ಸಂದರ್ಭದಲ್ಲಿ ಸೀತಾರಾಮ್, ಪವನ್ ಬಂಗೇರ, ರಂಜಿತ್, ಚೇತನ್ ಆಚಾರ್ಯ, ಗಣೇಶ್ ಶೆಟ್ಟಿ, ತಾರಾನಾಥ್, ಮನೋಜ್, ಭುವನೇಶ್ ಉಪಸ್ಥಿತರಿದ್ದರು.

ಬೆಳ್ತಂಗಡಿ: ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವು

ಮಂಗಳೂರು: ವಿದ್ಯುತ್ ಸ್ಪರ್ಶಿಸಿ‌ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಬೆಳ್ತಂಗಡಿಯ ರೆಂಕೆದಗುತ್ತುವಿನಲ್ಲಿ ಸಂಭವಿಸಿದೆ. ರೆಂಕೆದಗುತ್ತು ನಿವಾಸಿ ದಿ.ಸಂಜೀವ ಎಂಬವರ ಪತ್ನಿ ಸುಂದರಿ (55), ಮೃತಪಟ್ಟವರು ಮಧ್ಯರಾತ್ರಿ ಹಟ್ಟಿಯಲ್ಲಿ ದನ, ಕರುಗಳು ಜೋರಾಗಿ ಕೂಗಿಕೊಂಡಿತ್ತು. ಹಟ್ಟಿಗೆ ತೆರಳಿದಾಗ ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿದ್ದಾರೆ. ಹಟ್ಟಿಯಲ್ಲಿ ವಿದ್ಯುತ್ ವೈರ್ ನಿಂದ ಕಬ್ಬಿಣದ ಕಂಬಕ್ಕೆ ವಿದ್ಯುತ್ ಹರಿದಿತ್ತು ಎನ್ನಲಾಗಿದೆ. ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಸೇರಿಸುವ ಮುನ್ನವೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಹಾಗೂ ಮೆಸ್ಕಾಂ ಅಧಿಕಾರಿಗಳ ಭೇಟಿ, ಪರಿಶೀಲನೆ ನಡೆಸಿದ್ದು, ಬೆಳ್ತಂಗಡಿ ಪೊಲೀಸ್ […]

ಗರ್ಡಾಡಿ: ಕಾಡುಪ್ರಾಣಿ ದಾಳಿಗೆ ಸಾಕುನಾಯಿ ಬಲಿ

ಬೆಳ್ತಂಗಡಿ, ಜು. 16: ಕಾಡುಪ್ರಾಣಿಯೊಂದು‌ ಸಾಕು ನಾಯಿಯನ್ನು ಕೊಂದು ಹಾಕಿರುವ ಘಟನೆ ತಾಲೂಕಿನ ಗರ್ಡಾಡಿ ಗ್ರಾಮದ ಡೆಂಜೋಳಿ ಎಂಬಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಡೆಂಜೋಳಿಯ ರಘುರಾಮ ಶೆಟ್ಟಿ ಎಂಬವರ ಮನೆಯ ಸಾಕು ನಾಯಿ ಸೋಮವಾರ ರಾತ್ರಿಯಿಂದ ನಾಪತ್ತೆಯಾಗಿತ್ತು. ಮಂಗಳವಾರ ಬೆಳಿಗ್ಗೆ ಮನೆಯವರು‌ ಹುಡುಕಾಡಿದಾಗ ಗದ್ದೆಯ ಸಮೀಪ ಮೃತದೇಹ ಪತ್ತೆಯಾಗಿದೆ. ನಾಯಿಯ ಮುಖದ ಭಾಗಕ್ಕೆ ಸಂಪೂರ್ಣ ಗಾಯವಾಗಿದ್ದು, ಕಣ್ಣುಗಳು‌, ಮೂತಿ ಚಚ್ಚಿ ಹುಡಿಯಾದಂತಿತ್ತು. ಚಿರತೆ ಅಥವಾ ಕಾಡು ಹಂದಿ ದಾಳಿ ನಡೆಸಿ ಕೊಂದಿರಬಹುದು ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ. […]

ವೇಣೂರು: ಫಲ್ಗುಣಿ‌ ನದಿಯಲ್ಲಿ ಮೃತದೇಹ ಪತ್ತೆ

ವೇಣೂರು, ಜೂ. 26: ಬೆಳ್ತಂಗಡಿ ತಾಲೂಕಿನ ವೇಣೂರು ಪಲ್ಗುಣಿ ನದಿ ಸಮೀಪದಲ್ಲಿ ಅನುಮಾನಸ್ಪದವಾಗಿ ವ್ಯಕ್ತಿಯ ಮೃತ ದೇಹ ಬುಧವಾರ ಪತ್ತೆಯಾಗಿದೆ. ಮೃತಪಟ್ಟ ವ್ಯಕ್ತಿ ಗುಣಪಾಲ್ (೬೦) ಎಂದು ಗುರುತಿಸಲಾಗಿದೆ. ಮೃತ ಗುಣಪಾಲ್ ಈ ಹಿಂದೆ ಸ್ಥಳೀಯ ಪಾರ್ಶ್ವನಾಥ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದು ಸ್ಥಳೀಯರಿಗೆ ಚಿರಪರಿಚಿತರಾಗಿದ್ದರು. ಇಂದು ಬೆಳಿಗ್ಗೆ ಶವ ನದಿಯಲ್ಲಿ ತೇಲುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಸ್ಥಳೀಯರ ಮಾಹಿತಿಯಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.