ಭಿಕ್ಷೆ ಬೇಡುವ ನೆಪದಲ್ಲಿ ಮನೆಯೊಂದರ ತೆಂಗಿನಕಾಯಿ ಗೋಣಿಯನ್ನೇ ಕದ್ದೊಯ್ಯಿದ ಮಹಿಳೆ!
ಉಡುಪಿ, ನ.7: ಕಾಪು ಪರಿಸರದಲ್ಲಿ ನ.6ರಂದು ಮಧ್ಯಾಹ್ನ ವೇಳೆ ಭಿಕ್ಷೆ ಬೇಡುವ ನೆಪದಲ್ಲಿ ಬಂದ ಮಹಿಳೆಯೊಬ್ಬರು ಮನೆಯೊಂದರ ಹೊರಗಡೆ ಇರಿಸಿದ್ದ 20ಕ್ಕೂ ಅಧಿಕ ತೆಂಗಿನ ಕಾಯಿಗಳಿದ್ದ ಗೋಣಿಯನ್ನೇ ಕಳವು ಮಾಡಿಕೊಂಡು ಹೋಗಿರುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪರಿಸರದಲ್ಲಿ ಭಿಕ್ಷೆ ಬೇಡಿಕೊಂಡು ಬಂದ ಬುರ್ಖಾ ಧರಿಸಿದ್ದ ಮಹಿಳೆ ಬೀಗ ಹಾಕಿರುವ ಮನೆಯೊಂದನ್ನು ಗಮನಿಸಿದಳು. ಮನೆಯ ಹಿಂಬದಿಯಿಂದ ಬಂದ ಆಕೆ ತನ್ನ ಮುಖಕ್ಕೆ ಪರ್ದಾ ಕಟ್ಟಿಕೊಂಡು ತೆಂಗಿನ ಕಾಯಿ ಇರಿಸಿದ್ದ ಗೋಣಿಯನ್ನು ಹೊತ್ತೊಯ್ದಳು. ಅದನ್ನು ಅಲ್ಲೇ ಸಮೀಪದಲ್ಲಿ ಬೀಗ ಹಾಕಿದ […]