ಹಾಸಿಗೆ ಗೋದಾಮಿಗೆ ಬೆಂಕಿ; ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ಸುಟ್ಟು ಕರಕಲು
ಮಂಗಳೂರು: ಹಾಸಿಗೆ ಗೋದಾಮಿಗೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾದ ಘಟನೆ ಮಂಗಳೂರು ತೊಕಟ್ಟು ಸಮೀಪದ ಕಲ್ಲಾಪು ಪಟ್ಲದಲ್ಲಿ ಶನಿವಾರ ನಡೆದಿದೆ. ಗೋದಾಮಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿದೆ. ಗೋದಾಮಿನಲ್ಲಿ ಬೆಂಕಿಯ ಕೆನ್ನಾಲಿಕೆ ಜಾಸ್ತಿಯಾಗುತ್ತಿದ್ದ ಹಿನ್ನೆಲೆ ತಕ್ಷಣ ಎಚ್ಚೆತ್ತುಕೊಂಡ ಸ್ಥಳೀಯರು, ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಬೆಂಕಿಯ ರಭಸಕ್ಕೆ ಗೋದಾಮಿನ ಒಳಗೆ ಇದ್ದ, ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಲಾಗಿದೆ. ಈ ಘಟನೆಯಲ್ಲಿ ಯಾವುದೇ ಜೀವ ಹಾನಿ ಸಂಭವಿಸಿದ […]