ಮಲ್ಪೆ: ಕಡಲಿನ ಅಲೆಯ ಸೆಳೆತಕ್ಕೆ ಸಿಲುಕಿದ 6 ಮಂದಿಯ ರಕ್ಷಣೆ

ಮಲ್ಪೆ: ಇಲ್ಲಿನ ಸಮುದ್ರದಲ್ಲಿ ನೀರಾಟವಾಡಲು ನೀರಿಗೆ ಇಳಿದಿದ್ದ ಪ್ರವಾಸಿಗರು ಕಡಲಿನ ಅಲೆಯ ಸೆಳೆತಕ್ಕೆ ಸಿಲುಕಿದ್ದು, ಇದರಲ್ಲಿ ಓರ್ವ ಮೃತಪಟ್ಟಿದ್ದು, 6 ಮಂದಿಯನ್ನು ರಕ್ಷಿಸಲಾಗಿದೆ. ಬೆಂಗಳೂರಿನ ಅಬ್ರಾರ್ ಎನ್ನುವವರು ಮೃತಪಟ್ಟವರು. ಮೈಸೂರಿನ ತೊಸಿಬ್, ತಮಿಳುನಾಡಿನ ಸೆಂಥಿಲ್, ಬಿಜಾಪುರದ ಬಸವರಾಜು, ನಮಾಜ್, ಸೋಹಮ್ ಮತ್ತು ಬೆಂಗಳೂರಿನ ಸಲಾಂ ಚೆರ್ರಿ ಎನ್ನುವವರನ್ನು ರಕ್ಷಿಸಲಾಗಿದೆ. ಮಂಗಳವಾರ ಮಧ್ಯಾಹ್ನ ಮಲ್ಪೆ ಬೀಚ್ ನಲ್ಲಿ ಮೈಸೂರು ಮೂಲದ ತೊಸಿಬ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ್ದು, ಈತನನ್ನು ಮಲ್ಪೆ ಅಭಿವೃದ್ದಿ ಸಮಿತಿಯ ಜೀವರಕ್ಷಕ ದಳದ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಆದರೆ […]

ಮಲ್ಪೆ ಬೀಚ್ ನಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ತೇಲುವ ಸೇತುವೆ

ಉಡುಪಿ: ಮಲ್ಪೆ ಬೀಚ್ ನಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ವಿನೂತನ ಮಾದರಿಯ ತೇಲುವ ಸೇತುವೆ ಅಳಡಿಸಲಾಗಿದ್ದು, ಮೇ.6 ರಿಂದ ಪ್ರವಾಸಿಗರಿಗೆ ಮುಕ್ತಗೊಳ್ಳಲಿದೆ. 100 ಮೀಟರ್‌ ಉದ್ದ ಮತ್ತು 3.5 ಮೀಟರ್‌ ಅಗಲ ವಿಸ್ತೀರ್ಣದ ತೇಲುವ ಸೇತುವೆ ಇದಾಗಿದ್ದು, ಸೇತುವೆಯ ಎರಡು ಇಕ್ಕೆಲಗಳಲ್ಲಿ ರೇಲಿಂಗ್‌ ಸಿಸ್ಟಮ್‌ ಅಳವಡಿಕೆ ಮಾಡಲಾಗಿದೆ. ಕೇರಳದ ಬೇಪೂರ್‌ ಬೀಚ್‌ ಬಳಿಕ ಕರ್ನಾಟಕದ ಮಲ್ಪೆ ಬೀಚ್‌ ನಲ್ಲಿ ಪ್ರಥಮ ಬಾರಿಗೆ ಪ್ರಯೋಗ ಮಾಡಲಾಗುತ್ತಿದೆ. ಇದು ಪ್ರವಾಸಿಗರಿಗೆ ಹೊಸ ಅನುಭವ ನೀಡಲಿದ್ದು, ಮಲ್ಪೆ ಪ್ರವಾಸೋದ್ಯಮಕ್ಕೆ ಹೊಸ ಮೆರಗು ನೀಡಲಿದೆ. […]

ಸಸಿಹಿತ್ಲು: ನೀರು‌ ಪಾಲದ ಇಬ್ಬರಲ್ಲಿ ಓರ್ವನ ‌ಶವ ಪತ್ತೆ

ಮಂಗಳೂರು: ಜುಲೈ 7ರಂದು‌ ಭಾನುವಾರ ಮಂಗಳೂರಿನ ಸಸಿಹಿತ್ಲು ಬೀಚ್ನಲ್ಲಿ ಸಮುದ್ರಪಾಲಾಗಿದ್ದ ಇಬ್ಬರಲ್ಲಿ ಓರ್ವನ ಶವ ಸೋಮವಾರ ಪತ್ತೆಯಾಗಿದೆ. ಪತ್ತೆಯಾದ ಶವವನ್ನು ಬಜ್ಪೆ ಸಿದ್ಧಾರ್ಥ ನಗರ ನಿವಾಸಿ ಸುಜಿತ್ ಅವರದ್ದು ಎಂದು ಗುರುತಿಸಲಾಗಿದೆ.‌ ಸಸಿಹಿತ್ಲು ಸಮೀಪ ಆಯೋಜಿಸಿದ್ದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಬಂದಿದ್ದ ಏಳು ಮಂದಿಯ ತಂಡದ ನಾಲ್ವರು ಯುವಕರು ನಿನ್ನೆ ಸಮುದ್ರಕ್ಕಿಳಿದಿದ್ದರು. ಈ ವೇಳೆ ಇಬ್ಬರು ಅಲೆಗೆ ಸಿಲುಕಿ ನಾಪತ್ತೆಯಾಗಿದ್ದರು‌. ಈ ಕುರಿತು ಸುರತ್ಕಲ್ ಪೊಲೀಸರು ಪ್ರಕರಣ ದಾಖಲಾಗಿದೆ.

ಸಸಿಹಿತ್ಲು: ಸಮುದ್ರಕ್ಕಿಳಿದ ಇಬ್ಬರು ಯುವಕರು ನೀರುಪಾಲು

ಮಂಗಳೂರು: ಸಮುದ್ರಕ್ಕೆ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲಾದ ಘಟನೆ ಮಂಗಳೂರಿನ ಸಸಿಹಿತ್ಲು ಬೀಚ್ ನಲ್ಲಿ ಭಾನುವಾರ ಸಂಭವಿಸಿದೆ. ಸ್ನಾನಕ್ಕಿಳಿದ ವೇಳೆ ಘಟನೆ ನಡೆದಿದ್ದು, ಬಜ್ಪೆ ನಿವಾಸಿ ಸುಜಿತ್ (32), ಕಾವೂರಿನ ಗುರುಪ್ರಸಾದ್ (28) ಮೃತಪಟ್ಟಿದ್ದಾರೆ. ಇನ್ನಿಬ್ಬರು ನೀರುಪಾಲಾಗುತ್ತಿದ್ದಾಗ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಅದರಲ್ಲಿ ಒರ್ವನ ಸ್ಥಿತಿ ಗಂಭೀರವಾಗಿದೆ. ಸಮೀಪದಲ್ಲಿ ಆಯೋಜಿಸಿದ ‘ಕೆಸರ್ಡೊಂಜಿ ದಿನ’ ಕಾರ್ಯಕ್ರಮದ ಬಳಿಕ ಯುವಕರು ಸ್ನಾನಕ್ಕೆಂದು ಸಮುದ್ರಕ್ಕೆ ತೆರಳಿದ್ದರು. ಮೂಲ್ಕಿ ಠಾಣ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

‘ಕಿಟ್ ಕ್ಯಾಟ್’ ರ್ಯಾಪರ್ ನಲ್ಲಿ ಮರವಂತೆ ಮಿಂಚಿಂಗ್: ನಮ್ಮ ಕರಾವಳಿಯ ಕಡಲ ಕಿನಾರೆಗೆ ಸಿಕ್ತು ಜಾಗತಿಕ ಮನ್ನಣೆ

ಉಡುಪಿ:ನಮ್ಮ ರಾಜ್ಯದ ಚಂದದ  ಕಡಲ ಕಿನಾರೆಗಳ ಪೈಕಿ ಮರವಂತೆಗೆ ಅದರದ್ದೇ ಆದ ಸೌಂದರ್ಯವಿದೆ. ಪ್ರವಾಸಿಗರ ಮೈ ಮನಗಳಲ್ಲಿ ಮರವಂತೆ ಯಾವಾಗಲೂ ಮೈ ನವಿರೇಳಿಸುವಂತಹ ಅನುಭವವನ್ನೇ ಕೊಡುತ್ತಿರೋದು ನಿಮಗೆಲ್ಲಾ ಗೊತ್ತು. ಈಗ ಇದೇ ಮರವಂತೆಯ ಕಡಲು  ಕಿಟ್ ಕ್ಯಾಟ್ ಚಾಕಲೇಟ್ ನ ರ್ಯಾಪರ್ ನಲ್ಲಿ ಮಿಂಚಿ ಜಗತ್ತಿನಲ್ಲೆಲ್ಲಾ ಓಡಾಡುತ್ತಿದೆ. ಹೌದು ಮರವಂತೆ ಬೀಚ್ ಚಿತ್ರವನ್ನು ಜಾಗತಿಕ ಮಟ್ಟದ ಪ್ರತಿಷ್ಠಿತ ಆಹಾರ ಪದಾರ್ಥಗಳ ಉತ್ಪಾದನೆ, ಮಾರಾಟದ ನೆಸ್ಲೆ ಸಂಸ್ಥೆ ‘ಕಿಟ್‌ಕ್ಯಾಟ್’ ಚಾಕಲೆಟ್  ತನ್ನ ರ್ಯಾಪರ್ ನಲ್ಲಿ ಬಳಸಿದೆ. ಆ ಮೂಲಕ ಮರವಂತೆ ಬೀಚ್ […]