ವೈಭವದ ಆಳುಪೋತ್ಸವಕ್ಕೆ ಸಿದ್ದಗೊಳ್ಳುತ್ತಿದೆ ಬಾರ್ಕೂರು

ಉಡುಪಿ:  ಜನವರಿ 25 ರಿಂದ 27 ರ ವರೆಗೆ ಬಾರ್ಕೂರಿನಲ್ಲಿ, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ತೋಟಗಾರಿಕಾ ಇಲಾಖೆ  ಉಡುಪಿ ಜಿಲ್ಲೆ ವತಿಯಿಂದ ನಡೆಯುವ ಆಳುಪೋತ್ಸವಕ್ಕೆ ಬಾರ್ಕೂರಿನ ನಂದರಾಯನ ಕೋಟೆ ಅತ್ಯಂತ ಆಕರ್ಷಕವಾಗಿ ಸಿದ್ದಗೊಳ್ಳುತಿದೆ. ಹಿಂದೆ ವಿಜಯನಗರ ಕಾಲದಲ್ಲಿ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದ ನಂದರಾಯ ನಿರ್ಮಿಸಿದ್ದ ಕೋಟೆ ಉತ್ಸವಕ್ಕೆ ಸಜ್ಜುಗೊಂಡಿದೆ,  ತೀರ ಇತ್ತೀಚಿನವರೆಗೆ ಗಿಡ ಗಂಟೆಗಳಿಂದ ಕೂಡಿದ್ದ ಕೋಟೆಯ 14.12 ಎಕ್ರೆ ಜಾಗವನ್ನು ಸುಮಾರು 20 ದಿನಗಳಿಂದ ಸ್ವಚ್ಛಗೊಳಿಸಲಾಗಿದೆ, ಇಷ್ಟು ದಿನ […]